ಸಚಿವ ಈಶ್ವರಪ್ಪ ನಡೆಗೆ ಬೊಮ್ಮಾಯಿ ಆಕ್ಷೇಪ

ಬೆಂಗಳೂರು, ಏ.1- ತಮ್ಮ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಬೇಸರಗೊಂಡು ಹಿರಿಯ ಸಚಿವ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮಸ್ಯೆ ಗಳಿದ್ದರು ಅದನ್ನು ಸರ್ಕಾರದೊಳಕ್ಕೆ ಬಗೆಹರಿಸಿಕೊಳ್ಳಬೇಕು. ರಾಜ್ಯಪಾಲರಿಗರ ದೂರು ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷವಾಗಿದ್ಸು ಅದರ ಉಲ್ಲಂಘನೆಯಾಗಬಾರದು ಎಂದರು.
ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ.ಏನೇ ಸಮಸ್ಯೆಗಳಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವರಿಷ್ಠರ ಬಳಿ ಇಲ್ಲವೇ ರಾಜ್ಯಪಾಲರ ಬಳಿ ಹೋಗಿವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿಯವರು ಹಣಕಾಸು ಸಚಿವರಾಗಿದ್ದು
ಹಣ ಬಿಡುಗಡೆ ಮಾಡುವ ಅಧಿಕಾರ ಇದೆ. ಸಂಬಂಧಪಟ್ಟ ಸಚಿವರ ಜವಾಬ್ದಾರಿಯೂ ಅಷ್ಟೇ ಇದೆ. ಪ್ರವಾಹ ಮತ್ತು ಕೋವಿಡ್‌ ಕಾರಣದಿಂದ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಹಣಕಾಸು ಪರಿಸ್ಥಿತಿ ತುಂಬಾ ಕಷ್ಟವಿತ್ತು.4–5 ತಿಂಗಳಲ್ಲಿ ಚೇತರಿಕೆ ಆಗಿದೆ. ಈ ಹಂತದಲ್ಲಿ ವೆಚ್ಚವನ್ನು ಪರಿಶೀಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಯವರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಬೊಮ್ಮಾಯಿ ಮುಖ್ಯಮಂತ್ರಿ ಗಳ ಕ್ರಮವನ್ನು ಸಮರ್ಥಿಸಿಕೊಂಡರು.