ಸಚಿವ ಈಶ್ವರಪ್ಪ -ಕಡೇಚೂರ್ ಭೇಟಿ:ಪಕ್ಷಕ್ಕೆ ಹಿರಿಯರ ತ್ಯಾಗ – ಆದರ್ಶ ಶ್ರೀರಕ್ಷೆ

ಕಲಬುರಗಿ:ಡಿ.1:ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಹಾಗೂ ಬಿ ಜೆ ಪಿ ಯ ಹಿರಿಯ ನಾಯಕರಾದ ಮಹಾದೇವಪ್ಪ ಕಡೇಚೂರ್ ಅವರನ್ನು ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ಅವರು ಕಲಬುರಗಿಯಲ್ಲಿ ಮನೆಗೆ ಭೇಟಿ ನೀಡಿ ಗೌರವಿಸಿದರು.
ನ 30ರಂದು ಕಲಬುರಗಿಗೆ ಆಗಮಿಸಿದ ಈಶ್ವರಪ್ಪ ಅವರು ಕಡೇಚೂರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದುದಕ್ಕೆ ಶಾಲು ಹೂ ಗುಚ್ಚ ನೀಡಿ ಸನ್ಮಾಸಿದರು. ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ ಸಚಿವ ಈಶ್ವರಪ್ಪ ಅವರನ್ನು ಸ್ವಾಗತಿಸಿ ಕಡೇಚೂರ್ ಅವರ ಸಾಧನೆ ಕೊಡುಗೆ ವಿವರಿಸಿ ಕಲಬುರಗಿಯಲ್ಲಿ ದೀನ್ ದಯಾಳ್ ನಗರ ಗೃಹ ಸಂಕೀರ್ಣಗಳನ್ನು ಕಟ್ಟಿಸಿ ಬಡ
ಬಗ್ಗರಿಗೆ ಮನೆಗಳನ್ನು ಹಂಚಿ ನೆರವಾದವರು. ಸಾಮಾಜಿಕ ಕಾರ್ಯದಿಂದ ಪಕ್ಷಕ್ಕೆ ಮತ್ತು ಈ ನಾಡಿಗೆ ನೆರವಾದವರು ಎಂದರು.
ಸಚಿವ ಈಶ್ವರಪ್ಪ ಅವರು ಮಾತನಾಡಿ ಚಿಲ್ಲಾಳ್, ಸೊಮಾನಿ, ಮಹಾಂತ ಗೌಡ ಮುಂತಾದವರು ಪಕ್ಷಕ್ಕೆ ಸ್ಮರಣೀಯ ಕೊಡುಗೆ ನೀಡಿದವರು ಅಂಥವರಲ್ಲಿ ಮಹಾದೇವಪ್ಪ ಕಡೇಚೂರ್ ನಮ್ಮ ಪಕ್ಷಕ್ಕೆ ತ್ಯಾಗ ಮನನೋಭಾವದಿಂದ ದುಡಿದ ಪ್ರತಿಫಲವಾಗಿ ಇಂದು ಉನ್ನತ ಸ್ಥಾನದಲ್ಲಿದೆ. ನಮ್ಮಂಥಹ ವರಿಗೆ ಮಾರ್ಗದರ್ಶನ ನೀಡುತ್ತಿರುವುದು ನಮ್ಮ ಸೌಭಾಗ್ಯ. ಹಿರಿಯ ಕಾರ್ಯಕರ್ತರು ಪಕ್ಷಕ್ಕೆ ಆದರ್ಶ ಮತ್ತು ಪ್ರೇರಣೆ. ಅದುವೇ ನಮ್ಮೆಲ್ಲ ಕಾರ್ಯಕರ್ತರಿಗೆಶ್ರೀ ರಕ್ಷೆ. ಕಡೇಚೂರು ಅವರು 91 ನೆಯ ವರ್ಷದಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದು ಅರ್ಹರೊಬ್ಬರನ್ನು ಪ್ರಶಸ್ತಿ ಹುಡುಕಿಕೊಂಡು ಬಂದಂತಾದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಹಿರಿಯರಾದ ಕಡೇಚೂರ್ ಅವರ ಆಶೀರ್ವಾದ ಪಡೆದರು.
ನೆ. ಲ. ನರೇಂದ್ರಬಾಬು, ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ, ಬಿ ಜೆ ಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ್ ರದ್ದೇವಾಡಗಿ ವೆಂಕಟೇಶ್ ಕಡೇಚೂರ್ ನರಸಿಂಹ ಮೆಂಡನ್, ಅಂಬಯ್ಯ ಗುತ್ತೇದಾರ್ ಮತ್ತಿತರರಿದ್ದರು