ಸಚಿವ ಆರ್. ಅಶೋಕ ಎಡವಟ್ಟು: ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈ ಹಾಕಿ ಪೋಟೊಗೆ ಪೋಸ್

ಬೆಂಗಳೂರು, ನ.11- ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿಯ ಪ್ರತಿಮೆ ಉದ್ಘಾಟನೆ ವೇಳೆ ಕಂದಾಯ ಸಚಿವ ಆರ್ ಅಶೋಕ ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಉದ್ಘಾಟಿಸಿದ ನಂತರ ನಡೆದ ಪೋಟೋ ಶೂಟ್ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಎರಡೂ ಭುಜದ ಮೇಲೆ ಸಚಿವ ಆರ್.‌ಅಶೋಕ ಕೈ ಹಾಕಿ ಪೋಟೋ ತೆಗೆಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರತಿಮೆಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಿಂತು ಪೋಟೋ ತೆಗೆಸಿಕೊಳ್ಳಲು ಸ್ವಾಮೀಜಿ ಅವರ ಎರಡೂ ಭುಜದ ಮೇಲೆ ಹಾಕಿ ಹಾಕಿ ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ.

ತಮ್ಮದೇ ಸಮುದಾಯದ ಸ್ವಾಮೀಜಿ ಅವರನ್ಮು ಇಡೀ ಒಕ್ಕಲಿಗ ಸಮುದಾಯ ಪೂಜ್ಯ ಭಾವನೆಯಲ್ಲಿ ನೋಡುತ್ತಿದೆ.

ಕಾಂಗ್ರೆಸ್ ಟೀಕೆ:..

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪೋಟೋ ತೆಗೆಸಿಕೊಳ್ಳುವ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ನಿಂತಿರುವುದಕ್ಕೆ ಕಾಂಗ್ರೆಸ್ ಕುಹಕವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪೋಟೋ ತೆಗೆಸಿಕೊಳ್ಳಲು ಹರಸಾಹಸ ಪಡಬೇಕೇ , ಪ್ರಧಾನಿ ಬಳಿ ಸ್ವತಂತ್ರವಾಗಿ‌ ನಿಲ್ಲಲೂ ಸಾದ್ಯವಿಲ್ಲವೇ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ನಲ್ಲಿ ಪ್ರಶ್ನಿಸಿದೆ.

ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹಿಂದೆ ನಿಂತು ಪೋಟೊ ತೆಗೆಸಿಕೊಂಡು ಮುಖ ತೋರಿಸುವುದು ಶೋಚನೀಯ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದೆ.