ಸಚಿವ ಆನಂದ್ ಸಿಂಗ್ ಸಹೋದರಿರಾಣಿ ಸಂಯುಕ್ತ ಕಾಂಗ್ರೆಸ್‌ಗೆ


ಬಳ್ಳಾರಿ: ವಿಜಯನಗರದ ಸಚಿವ ಆನಂದ್ ಸಿಂಗ್ ಅವರ ಸಹೋದರಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿ ಸಂಯುಕ್ತ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ತಮ್ಮ ಮತ್ತು ಪತಿ ಶ್ರೀನಿವಾಸ ರೆಡ್ಡಿಯ ರಾಜಕೀಯ ಜೀವನದಿಂದಲೂ ಬಿಜೆಪಿಯಲ್ಲಿ ಬೆಳೆದು ಬಂದಿದ್ದ ರಾಣಿ ಸಂಯುಕ್ತ ಈ ಬಾರಿ ವಿಜಯನಗರದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಸಹೊದರ ಆನಂದ್ ಸಿಂಗ್ ಪಟ್ಟು ಬಿಡದೆ ತನ್ನ ಮಗನಿಗೆ ತಂದಿದ್ದರಿಂದ, ಅಲ್ಲದೆ ಈ ವರಗೆ ಸಹೋದರ ಸಮಾಧಾನ ಮಾಡಲೂ ಬಾರದೇ ಇದ್ದ ಕಸರಣ ಬೇಸತ್ತು ಕಾಂಗ್ರೆಸ್ ಸೇರಿದ್ದಾರೆ.
ತಾವಷ್ಟೇ ಅಲ್ಲದೆ ತಮ್ಮ ಬೆಂಲಿಗರುನ್ನು ಕಾಂಗ್ರೆಸ್ ಗೆ ಕರೆ ತಂದಿದ್ದಾರೆ. ಇದರಿಂದ ಈ ಬಾರಿ ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಆರ್. ಗವಿಯಪ್ಪ ಅವರಿಗೆ ಸಹಕಾರಿಯಾಗಬಹುದು.

ನಿನ್ನೆ ರಾತ್ರಿ ರಾಜ್ಯ ಉಸ್ತುವಾರಿ ರಣಧೀರ ಸಿಂಗ್ ಸುರ್ಜೇನವಾಲ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿ ಪ್ರಸಾದ್ ಅವನ್ನು ಬಿಜೆಪಿ ಪಕ್ಷದ ಮುಖಂಡರಾದ ಯರ್ರಿಬಾಬು ಅನಂತ ಪದ್ಮನಾಭ, ವ್ಯಾಸನ ಕೇರಿ ಶ್ರೀನಿವಾಸ, ಅನಿಲ್ ಜೋಷಿ, ಪಿ.ವೀರಾಂಜನೇಯ, ಜಂಬಾನಳ್ಳಿ ವಸಂತ, ಧನಲಕ್ಷ್ಮೀ, ಗೋವಿಂದ ರಾಜ, ಮಣಿಕಂಠ, ಸಿದ್ದಪ್ಪ, ಶಿವರಾಮಪ್ಪ ಕಾಗಿ,ನೇಕಾರತಿಪ್ಪೆ ರುದ್ರಪ್ಪ, ಹೊಸಗೇರಪ್ಪ ಮಹಾಂತೇಶ, ಬಸವರಾಜ ದೇವೇಂದ್ರಪ್ಪ ಕೆ.ನಾಗಪ್ಪ‌ಅವರೊಂದಿಗೆ ಭೇಟಿ ಮಾಡಿ ಮಾತುಕತೆ ಮಾಡಿದ್ದರು.

ಇಂದು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಣಿ ಸಂಯುಕ್ತ ಸಿಂಗ್ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ರಾಜ್ಯಸಭಾ ಸಧ್ಯಸ ಜೈರಾಮ ರಮೇಶ್, ಎಐಸಿಸಿ ವಕ್ತಾರ ವಲ್ಲಭ್ ಗೌರವ್, ಅಲ್ಕಾ ಲಂಭಾ , ವಿಧಾನ ಪರಿಷತ್ ಸದಸ್ಯ ಕೆಪಿಸಿಸಿ ವಕ್ತಾರ ದೀನಶ್ ಗೂಳಿಗೌಡಾ, ಕಾಂಗ್ರೆಸ್ ಪಕ್ಷದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಪಿ.ಬಾಬು, ಸಿದ್ದಾರ್ಥ ರೆಡ್ಡಿ ಮತ್ತಿರೊಂದಿಗೆ ಕೆಪಿಸಿಸಿ‌ಕಚೇರಿಯಲ್ಲಿ ಪಕ್ಷ ಸೇರಿದರು.