ಸಚಿವ ಆನಂದಸಿಂಗ್ ಉಜ್ಜಯಿನಿ ಪೀಠಕ್ಕೆ ಭೇಟಿ

ಸಂಜೆವಾಣಿ ವಾರ್ತೆ
ಕೊಟ್ಟೂರು, ಜ.15: ವೀರಶೈವ ಪಂಚಪೀಠಗಳಲ್ಲಿ ಒಂದಾದ ತಾಲೂಕಿನ ಉಜ್ಜಿನಿ ಪೀಠಕ್ಕೆ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪೀಠದ ಸಿದ್ದಲಿಂಗ ಜಗದ್ಗುರು ಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ ಉಜ್ಜಯಿನಿ ಮರುಳಸಿದ್ದೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ತೆಗೆದು ಕೊಳ್ಳದಂತೆ ಮುಖ್ಯ ಮಂತ್ರಿ ಯೊಂದಿಗೆ ಚರ್ಚಿಸಿ ಭಕ್ತರಿಗೆ ಗೊಂದಲ ಉಂಟಾಗದಂತೆ ನೋಡಿಕೊಳ್ಳುವೆ ಎಂದರು.
ಈ ಸಂದರ್ಭದಲ್ಲಿ ಪೀಠದ ಕಾರ್ಯದರ್ಶಿ ಎಂಎಂಜೆ ಹರ್ಷವರ್ಧನ್,
ಕಾನಮಡಿಗಿನ ಐಮುಡಿಶರಣಾರ್ಯರು ಸೇರಿದಂತೆ ವಿವಿಧ ಮಠಧೀಶ್ವರರು ಇದ್ದರು.
Attachments area