ಸಚಿವೆ ಸ್ಮೃತಿ ಇರಾನಿ ಪುತ್ರಿ ಅಕ್ರಮ ಬಾರ್ ಪರವಾನಗಿ: ಕೇಂದ್ರ ಸಂಪುಟದಿಂದ ಕೈಬಿಡಲು ಕೈ ಆಗ್ರಹ

ನವದೆಹಲಿ,ಜು.23,- ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ , ಈ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಅವರನ್ನು ಸಂಪುಟದಿಂದ ಸ್ಥಾನದಿಂದ ವಜಾ ಮಾಡಬೇಕೆಂದು ಕಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ,‌ ಸಚಿವೆ ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ಮಗಳು ಗೋವಾದಲ್ಲಿ ಅಕ್ರಮ ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಚಿವರ ಪುತ್ರಿಯ ಅಕ್ರಮ ಬಾರ್ ಗೆ ನೋಟೀಸ್ ನೀಡಿದ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನ ಮಾಡಲಾಗುತ್ರಿದೆ. ಸಚಿವರ ಹಸ್ತಕ್ಷೇಪ ವಿಲ್ಲದೆ ಏನೂ ನಡೆಯುವುದಿಲ್ಲ ಎಂದು ದೂರಿದ್ದಾರೆ.

ಸ್ಮೃತಿ ಇರಾನಿ ಅವರ ಮಗಳು ಕೀರತ್ ನಗ್ರಾ‌ ಸತ್ತ ವ್ಯಕ್ತಿಯ ಹೆಸರಲ್ಲಿ ಪರವಾನಗಿ ಹೊಂದಿದ್ದಾರೆ. 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ. ಆ ಪರವಾನಗಿಯನ್ನು 2022 ರ ಜೂನ್‌ನಲ್ಲಿ ಗೋವಾದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿಯಲ್ಲಿರುವ ಹೆಸರಿನ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ

ಆರೋಪ ನಿರಾದಾರ:

ಕಿರಾತ್ ನಾಗ್ರಾ ಅವರ ಪರ ವಕೀಲರು ಪ್ರತಿಕ್ರಿಯಿಸಿ ಆರೋಪ ಆಧಾರರಹಿತವಾದುದು. ನಾಗ್ರಾ ಅವರು ಪ್ರಭಾವಿ ವ್ಯಕ್ತಿಯ ಮಗಳು ಎಂಬ ಕಾರಣಕ್ಕೆ ಇಂತಹ ಸುಳ್ಳು ಸುದ್ದಿ ಪ್ರಚಾರಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಿರಾತ್ ನಾಗ್ರಾ ಗೊವಾದಲ್ಲಿರುವ ಸಿಲ್ಲಿ ಸೌಲ್ಸ್ ರೆಸ್ಟೋರೆಂಟ್‌ನ ಮಾಲಕಿ ಅಥವಾ ನಿರ್ವಾಹಕಿ ಆಗಿಲ್ಲ. ಅವರು ಈ ಬಗೆಗಿನ ವಿಚಾರದಲ್ಲಿ ಯಾವುದೇ ಪ್ರಾಧಿಕಾರದಿಂದಲೂ ಶೋಕಾಸ್ ನೋಟಿಸ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.