ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಸನ್ಮಾನ

ಸಂಜೆವಾಣಿ ವಾರ್ತೆಕೊಪ್ಪಳ, ಅ.23: ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ರಮೇಶ ಸಂಘಾ ಅವರು ಇತ್ತಿಚೇಗೆ ಜರುಗಿದ ಸಚಿವಾಲಯ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಜೊತೆಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದಕ್ಕೆ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅಭಿಜಿತ ಅವರನ್ನು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಲಕ್ಷ್ಮಣ್ಣ.ಬಿ.ಎಸ್.ಅವರು ಇತ್ತಿಚೇಗೆ ಜರುಗಿದ ಸಚಿವಾಲಯ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಈ ಸಮಯದಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ವಿಕಲಚೇತನ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಯರಾಮಯ್ಯಾ ಹೆಚ್.ಜಿ,ಸಂಘಟನಾ ಕಾರ್ಯದರ್ಶಿ ತುಕಾರಾಮ ಲಮಾಣಿ,ಸಾಂಸ್ಕತಿಕ ಕಾರ್ಯದರ್ಶಿ ಸುಭ್ರಮಣಿ,ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ.ಎಸ್.ಆರ್,ವಿಭಾಗೀಯ ಸಹ ಕಾರ್ಯದರ್ಶಿಗಳಾದ ಅಶ್ವಥಪ್ಪ.ಸಿ.ಆರ್,ಚಂದ್ರಪ್ಪ ಸಿದಗೊಂಡ,ಮಹಿಳಾ ಉಪಾಧ್ಯಕ್ಷರಾದ ಭಾರತಿ,ಕಲಬುರಗಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುಮಸಿ,ಯಾದಗಿರಿಯ ಸಂತೋಷ ನಿರಲೋಟಿ,ನಿರ್ದೇಶಕರಾದ ಸೋಮಶೇಖರ,ವಿಜಕುಮಾರ ಹಾಲಕುರ್ಕಿ,ಶ್ರೀನಿವಾಸಮೂರ್ತಿ ಮುಂತಾದವರು  ಹಾಜರಿದ್ದರು.ಪೋಟೊ: ಸಚಿವಾಲಯ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಸಂಘಾ ಹಾಗೂ ಕಾರ್ಯದರ್ಶಿ ಅಭಿಜಿತ ಅವರನ್ನು ಎನ್.ಪಿ.ಎಸ್.ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.