ಸಚಿವಾಕಾಂಕ್ಷಿ ಶಾಸಕರ ಸಭೆ

ಬೆಂಗಳೂರು ನ. 11-ಸಂಪುಟ ಸಂಪುಟ ವಿಸ್ತರಣೆ ನಿಶ್ಚಿತ ವಾಗುತ್ತಿದ್ದಂತೆ ಸಚಿವಾಕಾಂಕ್ಷಿ ಶಾಸಕರುಗಳು ಭೋಜನಕೂಟ ನೆ ಸಭೆ ಸಮಾಲೋಚನೆಗಳು ಬಿರುಸಾಗಿದೆ
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಲ್ಕೈದು ಶಾಸಕರು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳೆ ನಿವಾಸದಲ್ಲಿ ಭೋಜನಕೂಟದ ಸಭೆ ನಡೆಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶಾಸಕರಾದ ಮುರುಗೇಶ್ ನಿರಾಣಿ ನರಸಿಂಹ ನಾಯಕ್ ಬೆಳ್ಳಿ ಪ್ರಕಾಶ್ ಇವರುಗಳು ಇಂದು ಯಡಿಯೂರಪ್ಪನವರನ್ನು ಭೇಟಿ ಮಾಡಿ ನಂತರ ಮಧ್ಯಾಹ್ನ ಸಚಿವ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದರು ಈ ಸಭೆಯಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು

ವಿಶೇಷವೇನಿಲ್ಲ ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನರಸಿಂಹನಾಯಕ ಸಚಿವಸ್ಥಾನಕ್ಕೆ ಈಗಾಗಲೇ ಅರ್ಜಿ ಹ ಅರ್ಜಿ ಹಾಕಿದ್ದೇವೆ ಇಂದಿನ ಸಭೆಯಲ್ಲಿ ವಿಶೇಷವೇನಿಲ್ಲ ನಾಳೆ ಸಚಿವ ಸಂಪುಟ ಸಭೆ ಇದೆ ಕೆಲ ನೀರಾವರಿ ಯೋಜನೆಗಳ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೆವು ಅಷ್ಟೇ ಎಂದರು
ಕರೋನಾ ಸಂದರ್ಭದಲ್ಲಿ ಸಚಿವ ಸ್ಥಾನಕ್ಕಾಗಿ ಒತ್ತಡ ಇರುವ ಪ್ರಶ್ನೆಯಿಲ್ಲ ಅರ್ಜಿ ಹಾಕಿದ್ದೇವೆ ಏನಾಗುತ್ತೆ ನೋಡೋಣ ಎಂದರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಲಾಗುತ್ತದೆ ಎಂಬುದು ಊಹಾಪೋಹ ಎಂದು ಅವರು ಹೇಳಿದರು