ಸಚಿವರ ಹೇಳಿಕೆ ಖಂಡಿಸಿ ಮನವಿ

ಲಕ್ಷ್ಮೇಶ್ವರ, ಮೇ4 : ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಕಡಿತಗೊಳಿಸಿರುವುದನ್ನು ಮತ್ತು ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಅನೇಕ ವರ್ಗಗಳು ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ಪರಿಹಾರ ನೀಡುವಂತೆ ಮತ್ತು ಆಹಾರ ಸಚಿವ ಉಮೇಶ್ ಕತ್ತಿಯವರು ಹೇಳಿಕೆಯನ್ನು ಖಂಡಿಸಿ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ರೈತರಿಗೆ ಮುಂಗಾರಿ ಬಿತ್ತನೆಯ ಈ ಸಂದರ್ಭದಲ್ಲಿ ಬೀಜ ಗೊಬ್ಬರ ಖರೀದಿಗಾಗಿ 20 ಸಾವಿರಗಳು ಹೂವು ಹಣ್ಣು ಬೆಳೆಗಾರರಿಗೆ ಒಂದು ಲಕ್ಷ ರೂ, ಬಡ ಕಾರ್ಮಿಕರಿಗೆ 10000 ಪರಿಹಾರ ಅವರ ಖಾತೆಗಳಿಗೆ ಜಮೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ಕೊಪ್ಪದ, ನಗರ ಘಟಕದ ಅಧ್ಯಕ್ಷ ಸರಫರಾಜ್ ಸೂರಣಗಿ, ಪುರಸಭೆ ಉಪಾಧ್ಯಕ್ಷ ರಾಮು ಗಡದವರ, ಎಂ.ಸ್ ದೊಡ್ಡಗೌಡ್ರ, ಚನ್ನಪ್ಪ ಜಗಲಿ, ಪುರಸಭೆ ಸದಸ್ಯರಾದ ಜಯಕ್ಕ ಕಳ್ಳಿ, ಸಾಹೀಬ್ ಜಾನ್ ಹವಾಲ್ದಾರ್, ಫಿರದೋಷ ಆಡೂರ, ಫಕ್ಕಿರೇಶ ಮ್ಯಾಟಣ್ಣವರ, ಮಹಾಂತೇಶ್ ಹೊಳಲಾಪುರ, ನೀಲಪ್ಪ ಶೆರಸೂರಿ, ವಿರುಪಾಕ್ಷ ನಂದೆಣ್ಣವರ ಮತ್ತಿತರರು ಹಾಜರಿದ್ದರು.