ಸಚಿವರ ಸೂಚನೆಗೂ ಕಿಮ್ಮತ್ತ ನೀಡದ ಖಾಸಗಿ ನರ್ಸಿಂಗ್ ಹೋಂ

ಹನೂರು: ಮೇ.27: ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಗೂ ಕಿಮ್ಮತ್ತನ್ನು ನೀಡದ ಪಟ್ಟಣದ ಖಾಸಗಿ ನರ್ಸಿಂಗ್ ಹೋಂ ಮುಖ್ಯಸ್ಥರಿಗೆ ಕಾನೂನು ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದು, ಈ ಬಗ್ಗೆ ಮುಖ್ಯಸ್ಥರು ಸಮಾಜಾಯಿಷಿ ನೀಡಲು ಕಾರಣ ಕೇಳಿ ಜಿಲ್ಲಾಧಿಕಾರಿಗಳು ನೋಟಿಸ್‍ನ್ನು ಜಾರಿ ಮಾಡಿದ್ದಾರೆ.
ಪಟ್ಟಣದ ಸ್ನೇಹ ನರ್ಸಿಂಗ್ ಹೋಂ ಮತ್ತು ಭಾರತಿ ನರ್ಸಿಂಗ್ ಹೋಂ ಖಾಸಗಿ ಆಸ್ಪತ್ರೆಯವರು ಕೊವೀಡ್ ನಿಯಮಗಳನ್ನು ಪಾಲಿಸದೆ ಇರುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ದಿ.21.05.2021 ರಂದು ಹನೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಈ ಎರಡು ನರ್ಸಿಂಗ್ ಹೋಂ ಮುಖ್ಯಸ್ಥರಿಗೆ ಕೊವೀಡ್ ನಿಯಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸೂಚನೆ ನೀಡಿದ್ದರು.
ಆದರೆ ಕೋವಿಡ್-19 ನಿಯಮ ಮತ್ತು ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸದೇ ಇರುವುದರ ಬಗ್ಗೆ ಕಂಡು ಬಂದಿದ್ದು ಮತ್ತು ಸಾರ್ವಜನಿಕರು ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಬಳಸದೇ ಇರುವುದಲ್ಲದೇ ಸಚಿವರು ಸೂಚಿಸಿರುವ ಆರ್‍ಎಟಿ ಮತ್ತು ವಿಟಿಎಂ ಕಿಟ್‍ಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಪಡೆದುಗಂಟಲುದ್ರವವನ್ನು ಸಂಗ್ರಹಿಸುವ ಬಗ್ಗೆ ಹಾಗೂ ಎಸ್‍ಎಆರ್‍ಐ ಕೇಸ್‍ಗಳ ಸೂಕ್ತ ಪರಿಶೀಲನೆ ನಡೆಸಿ ಹತ್ತಿರದ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಕೊಡುವ ಬಗ್ಗೆ ಈಗಾಗಲೇ ತಿಳಿಸಿದ್ದರೂ ಸಹ ಈ ಯಾವುದೇ ಪ್ರಕ್ರಿಯೆಗಳನ್ನು ನಿರ್ವಹಿಸದೇ ಇರುವುದರಿಂದ ನಿಮ್ಮಿಂದ ಚಿಕಿತ್ಸೆ ಪಡೆದು ಸರ್ಕಾರಿ ಸಂಸ್ಥೆಗಳಿಗೆ ವಿಳಂಬವಾಗಿ ದಾಖಲಾಗುತ್ತಿರುವುದರಿಂದ ಸೋಂಕಿತರ ಪ್ರಮಾಣ ಹೆಚ್ಚಾಗಿ ಹರಡಲು ಹಾಗೂ ಮರಣ ಪ್ರಮಾಣ ಹೆಚ್ಚಾಗಲು ಕಂಡು ಬಂದಿರುತ್ತದೆ.
ಈ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾಕಾಯ್ದೆ 2005ರ ಸೆಕ್ಸನ್ 58ರಡಿ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಸನ್ 188ರ ರೀತ್ಯಾ ಕಾನೂನು ಕ್ರಮ ಜರುಗಿಸುವ ಹಾಗೂ ಕೆ.ಪಿ.ಎಂ.ಇ ಕಾಯ್ದೆ 2017 ಸೆಕ್ಸನ್ 11 ಮತ್ತು 11(ಎ) ಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದಂತಾಗಿರುತ್ತದೆ. ಆಗಾಗಿ ಈ ಸಂಬಂಧತಮ್ಮ ಖಾಸಗಿ ನರ್ಸಿಂಗ್ ಸಂಸ್ಥೆಯ ಮೇಲೆ ಏಕೆ ಕಾನೂನು ಕ್ರಮಜರುಗಿಸಬಾರದೆಂಬುದರ ಬಗ್ಗೆ ಸೂಕ್ತ ಸಮಜಾಯಿಷಿ ನೀಡಲು ಆದೇಶಿಸಿದೆ.ತಪ್ಪಿದ್ದಲ್ಲಿ ತಮ್ಮ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪರಿಗಣಿಸುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಸಹಿಯೊಂದಿಗೆ ಕಾರಣ ಕೇಳಿ ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ.
ಸಚಿವರಿಗೆ ಕ್ಯಾರೆ ಎನ್ನದ ನರ್ಸಿಂಗ್ ಹೋಂ ಮುಖ್ಯಸ್ಥರು
ಸರ್ಕಾರದ ಭಾಗವಾಗಿರುವ ಹಾಗೂ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಪ್ರಭಾವಿ ಸಚಿವ ಎಸ್.ಸುರೇಶ್‍ಕುಮಾರ್ ಮಾತಿಗೂ ಕ್ಯಾರೆ ಎನ್ನದ ಪಟ್ಟಣದ ನರ್ಸಿಂಗ್ ಹೋಂ ಮುಖ್ಯಸ್ಥರು ಇನ್ನೂ ಸ್ಥಳಿಯ ತಾಲ್ಲೂಕು ವೈದ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಮಾತನ್ನು ಕೇಳುವ ವ್ಯವಧಾನ ಇದೀಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸಲಕರಣೆಗಳು, ಸಿಬ್ಬಂದಿಗಳ ಅನುಕೂಲ ವಿರುವ ಈ ಖಾಸಗಿ ನರ್ಸಿಂಗ್ ಹೋಂಗಳಿಗೆ ದಿನಂಪ್ರತಿ ಅನೇಕ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ರೋಗಿಗಳ ಹತ್ತಿರದು ಪ್ಪಟ ಹಣ ಪಡೆದು ಚಿಕಿತ್ಸೆ ಪಡೆಯುವುದು ಮಾಮೂಲಿಯಾಗಿದೆ.
ಆದರೆ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದೇ ಹಾಗೂ ಸಾವು ನೋವಿನ ಪ್ರಮಾಣ ಕಡಿಮೆ ಮಾಡುವ ದಿಸೆಯಲ್ಲಿ ಕಾಳಜಿ ವಹಿಸದೇ ಕೇವಲ ಉದ್ಯಮವಾಗಿ ಆದಾಯವನ್ನು ಮಾಡುವ ದಿಸೆಯಲ್ಲಿ ಖಾಸಗಿ ನರ್ಸಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಮೂಡುವಂತಾಗಿದ್ದು, ಇಲ್ಲಿನ ಮುಖ್ಯಸ್ಥರುಗಳು ಪ್ರಭಾವಿಗಳಾಗಿರುವುದರಿಂದ ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತೀವೆ.
ಅದ್ಯೇನೆ ಆಗಲಿ ಕೋವಿಡ್ ವಿಷಮಯ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಆರೋಗ್ಯ ಇಲಾಖೆ ಜೊತೆ ಸಮನ್ವಯ ಸಾಧಿಸುವ ಮೂಲಕ ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಲಿ ಎಂಬುದು ಪ್ರಜ್ಞಾವಂತರ ಆಂಬೋಣ.
ಸಚಿವರು ಶಾಸಕರು ಸೇರಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಕೊರೊನಾತಹಬದಿಗೆ ತರಲುಈ ನರ್ಸಿಂಗ್ ಹೋಂ ಮುಖ್ಯಸ್ಥರಿಗೆ ಬುದ್ದಿ ಮಾತನ್ನು ಹೇಳಿ ಕಳುಹಿಸಿದ್ದರೂ ಇಂತಹವರ ಮಾತನ್ನು ಕೇಳದ ಇವರು ಸಾಮಾನ್ಯಜನರ ಮಾತನ್ನು ಕೇಳುವರೇ? ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೇ.