ಸಚಿವರ ನೇತೃತ್ವದಲ್ಲಿ ಕೊರೋನಾ ನಿಯಂತ್ರಣ ಸಭೆ

ಸಂಡೂರು:ಏ:27: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅನಂದ ಸಿಂಗ್ ನೇತೃತ್ವದಲ್ಲಿ ಕರೋನಾ 2ನೇ ಅಲೆ ನಿಯಂತ್ರಣದ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಶಾಸಕರು, ತಹಶೀಲ್ದಾರ್ ಜನರ ಮದ್ಯದಲ್ಲಿ ರೌಡಿಯ ರೀತಿಯಲ್ಲಿ ಲಾಠಿ ಬೀಸುತ್ತಿದ್ದು ಬೇಸರದ ಸಂಗತಿಯಾಗಿದೆ, ಈಗಾಗಲೇ ಉತ್ತಮರೀತಿಯಲ್ಲಿ ಜನರಿಗೆ ತಿಳಿ ಹೇಳುವ ಕಾರ್ಯಬಿಟ್ಟು ಹೋಗುವುದು ಸರಿಯಲ್ಲ, ಅಲ್ಲದೆ ಸಭೆಗಳಿಗೆ ಕರೆಯದೇ ಏಕಸ್ವಾಮ್ಯ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ ಎಂದು ಕೆಂಡಕಾರಿದರು.
ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಅನಂದ ಸಿಂಗ್ ಮದ್ಯ ಪ್ರವೇಶಿಸಿ, ಶಾಸಕ ಈ.ತುಕರಾಂ ಅವರು ಉತ್ತಮ ಕಾರ್ಯನಿರ್ವಹಿಸುವವರು ಅವರ ಅನುಭವವನ್ನು ತಾಲೂಕು ಆಡಳಿತ ಖಂಡಿತ ಪಡೆದುಕೊಳ್ಳಬೇಕು, ಅಲ್ಲದೆ ಕಡ್ಡಾಯವಾಗಿ ಅವರನ್ನು ಇಂತಹ ಕ್ಲಿಸ್ಟಸ್ಥಿತಿಯಲ್ಲಿ ಕರೆದು ಮೊದಲೆ ಚರ್ಚಿಸಿ ಈ ಸಭೆ ನಡೆಸಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು, ಸಮಯದ ಉಳಿತಾಯವಾಗುತ್ತಿತ್ತು, ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದರು, ಕೊರೋನಾಎರಡನೆಅಲೆಯಲ್ಲಿಕೋವಿಡ್ ಸೋಂಕಿತರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದುಅಂತಹ ಹೋಮ್‍ಐಸೋಲೇಷನ್‍ಇರುವವರ ಮೇಲೆ ತಾಲೂಕು ಆಡಳಿತ ಸಂಪೂರ್ಣ ನಿಗಾವಹಿಸಬೇಕು ಎಂದರು.
ಸಂಡೂರು ತಾಲೂಕಿನಲ್ಲಿ 700 ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 36 ಸೋಂಕಿತರು ಆಸ್ಪತ್ರೆಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 624 ಮಂದಿ ಮನೆಯಲ್ಲಿದ್ದುಟ್ರೀಟ್ಮೆಂಟ್ ಪಡೆಯುತ್ತಿರುವ ವರದಿಯನ್ನು ಪ್ರಭಾರಿತಾಲೂಕು ವೈದ್ಯಾಧಿಕಾರಿಕುಶಾಲ್‍ರಾಜ್ ಸಭೆ ಗಮನಕ್ಕೆ ತಂದಾಗ, ಮಾತನಾಡಿದ ಸಚಿವರು , ತಾಲೂಕಿನಲ್ಲಿ ಹೋಮ್‍ಐಸೋಲೇಷನ್ ನಲ್ಲಿರುವವರ ಸಂಖ್ಯೆಯೇ ಹೆಚ್ಚಿದ್ದುಇವರೆಲ್ಲ ಸ್ವತಂತ್ರವಾಗಿ ಎಲ್ಲೆಂದರಲ್ಲಿಓಡಾಡಿಕೊಂಡು ಬಂದರೆ ವೈರಸ್ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚು ಇರುತ್ತವೆ ಹಾಗಾಗಿ ಜಾಗ್ರತೆ ವಹಿಸಿ ಎಂದುತಾಕೀತು ಮಾಡಿದರು . ಆ ರೀತಿಓಡಾಡುವವರನ್ನು ಒತ್ತಾಯಪೂರ್ವಕವಾಗಿಯಾದರೂ ಕರೆದುಕೊಂಡು ಹೋಗುತ್ತಾರೆ ಎಂಬುದು ಸಾರ್ವಜನಿಕರಿಗೆ ತಿಳಿಯುವಂತಾಗಲಿ ಇದರಿಂದ ಆ ಚೈನ್ ಬ್ರೇಕ್ ಮಾಡಲು ಸಾಧ್ಯ ಆಶಾ ಕಾರ್ಯಕರ್ತೆಯರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲು ತಿಳಿಸಿದ್ದಾರೆ
ಶಾಸಕ ಈ.ತುಕಾರಾಂ ಮಾತನಾಡಿ , ತೋರಣಗಲ್ಲು , ಸಂಜೀವಿನಿ , ತಾಲೂಕು ಆಸ್ಪತ್ರೆ , ಬಂಡ್ರಿ ಭಾಗದ ಮುರಾರ್ಜಿದೇಸಾಯಿ ಶಾಲೆ , ಕೊಡಾಲು ಹಾಗೂ ವಿಠಲಾಪುರದ ಭಾಗದಜನರನ್ನುಅಲ್ಲಿಯೇ ಸರ್ಕಾರಿಆಸ್ಪತ್ರೆಯಲ್ಲಿಇರಿಸುವುದು ಸೇರಿದಂತೆ ಸೋಂಕಿತರನ್ನು ವಿಭಾಗಿಸಬೇಕ ುಎಂದು ತಮ್ಮ ಅನಿಸಿಕೆ ಹಂಚಿಕೊಂಡರು . ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು , ಜಿಲ್ಲಾಡಳಿತದ ಕೋರಿಕೆಯಂತೆ ತಾಲೂಕಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕೇವಲ ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೆ ಖಾಸಗಿ ಹಾಸ್ಪಿಟಲ್ ಗಳಿಗೂ ಸೇರಿಕೊಂಡು ಲಿಸ್ಟ್ ಮಾಡಲು ಸೂಚಿಸಿದರು. ತಾಲೂಕು ಸರ್ಕಾರಿ ಆಸ್ಪತ್ರೆಗೆ ಒಟ್ಟು 25 ರೆಮಿಡಿಸಿವರ್ ನೀಡಲಾಗಿತ್ತು . ಈಗಾಗಲೇ 6 ಬಳಕೆಯಾಗಿ ಇನ್ನೂ 19 ಉಳಿದಿವೆ. 4 ವೆಂಟಿಲೇಟರ್ ಗಳಿವೆ. ಹಾಗಾಗಿ ಅವಶ್ಯಕ ಸಾಮಾಗ್ರಿಗಳ ಪಟ್ಟಿ ತಯಾರಿಸಿ ಎಂದರು .
ಮೂರು ವಾರಕಂದಾಯ ಇಲಾಖೆ ಬೇರೆ ಕೆಲಸ ಮಾಡಬೇಡಿ : ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ತಹಶಿಲ್ದಾರ್ ಸೇರಿದಂತೆಕಂದಾಯಇಲಾಖೆಯವರುಎರಡು ಮೂರು ವಾರಗಳ ತನಕಕೊರೋನಾ ನಿಯಂತ್ರಣದ ಕೆಲಸಗಳನ್ನೇ ಮಾಡಿ ಎಂಬ ಆದೇಶಮಾಡಿದರು . ಹೋಮ್‍ಐಸೋಲೇಷನ್ ಮಾಡುವ ಮುನ್ನಅಲ್ಲಿ ನಿರ್ವಹಿಸಲು ಸಾಧ್ಯವಾಎಂಬುದನ್ನುಕೂಡಾ ಅವಲೋಕಿಸಿ ಅವಕಾಶ ಮಾಡಿಕೊಡಿ ,ಜಾಗಇಲ್ಲದ ಸಂದರ್ಭಗಳಲ್ಲಿ ಕೋವಿಡ್‍ಕೇರ್ ಸೆಂಟರ್ ಗಳಿಗೆ ರೋಗಿಗಳನ್ನು ಕಳುಹಿಸಿಕೊಡಿ , ಪ್ರಕರಣಗಳ ಟ್ರೇಸಿಂಗ್ ವಿಷಯದಲ್ಲಿ ಸಂಡೂರು ಹಿಂದಿದೆ ಈ ಬಗ್ಗೆ ಗಮನವಹಿಸಿ . ಮೇ ಮೊದಲ ವಾರದಿಂದ 18 ವರ್ಷ ಮೇಲ್ಪಟ್ಟಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುತ್ತಿದ್ದು ಹೆಸರುಗಳನ್ನು ನಮೂದಿಸಿಕೊಳ್ಳಬೇಕು . 45 ವರ್ಷ ಮೇಲ್ಪಟ್ಟವರಿಗೆ ಈಗಲೇ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಿ ಇಲ್ಲವಾದರೆಎಲ್ಲಾಒಂದೇ ಬಾರಿ ಹಾಕಲು ಮುಂದಾದಾಗ ಸಮಸ್ಯೆಗಳಾಗಬಾರದು . ಸಂಡೂರುತಾಲೂಕಿಗೆ 68 ಸಾವಿರ ಲಸಿಕೆ ಟಾರ್ಗೆಟ್ ನೀಡಲಾಗಿದ್ದು ಕೇವಲ 27 ಲಸಿಕೆ ಹಾಕಲಾಗಿದ್ದುಇನ್ನೂ ಹೆಚ್ಚು ಹಾಕಲು ಸೂಚಿಸಿದರು . ಪೊಲೀಸ್‍ಇಲಾಖೆಯವರು ಹೆಚ್ಚು ಜನರಿಗೆ ಮಾಸ್ಕ್ ಹಾಕಿಸಿಕೊಳ್ಳುವಂತೆ ಕ್ರಮವಹಿಸಿ ಎಂದರು .
ಸಭೆಯಲ್ಲಿತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು .ಸಭೆಯ ನಂತರ ಸಚಿವರು ,ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸಂಡೂರುತಾಲೂಕುಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು .