ಸಚಿವರ ಗ್ರಾಮ ಸಂಚಾರ ಮಾದರಿ : ವಡಿಯಾರ

ಔರಾದ : ಸೆ.8:ತಾಲೂಕಿನಾದ್ಯಂತ ಹಾಗೂ ನಗರದ ಪ್ರತಿ ವಾಡ್ರ್ಗಳಲ್ಲಿ ಸಂಚಾರ ಕೈಗೊಂಡ ಸಚಿವ ಪ್ರಭು ಚವ್ಹಾಣ ಅವರ ಕಾರ್ಯ ಮಾದರಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಂಜುಕುಮಾರ ವಡಿಯಾರ ಹೇಳಿದರು.

ಔರಾದ ನಗರದಲ್ಲಿ ಸುಮಾರು 17ಕೋಟಿಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ,
ಔರಾದನಲ್ಲಿ ಪ್ರತಿ ವಾರ್ಡಗೂ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ 20 ವಾರ್ಡಗಳಲ್ಲಿ ಸರಿಸುಮಾರು 17 ಕೋಟಿ ವೆಚ್ಚದ ಕಾಮಗಾರಿಗಳಿಗೆ ಪೂಜೆ ಮಾಡಿದ ಜನಪ್ರಿಯ ಸಚಿವ ಪ್ರಭು.ಬಿ.ಚವ್ಹಾಣ ರವರಿಗೆ ಧನ್ಯವಾದ ಸಲ್ಲಿಸುತ್ತೆನೆ. ಸಚಿವರು ಸದಾ ಅಭಿವೃದ್ಧಿಯ ಮಂತ್ರ ಜಪಿಸುವ ಮಹಾ ಕಾಯಕವಾದಿ ನಾಯಕನಾಗಿದ್ದು ಇದು ಔರಾದ ಪಟ್ಟಣದ ಪುಣ್ಯವೇ ಸಚಿವರ ನೇತೃತ್ವದಲ್ಲಿ ನಾವು ಸದಾ ಪಟ್ಟಣದ ಸೇವೆಯಲ್ಲಿರುತ್ತೇವೆ ಸಚಿವರ ಈ ಅಭಿವೃದ್ಧಿಯ ಕೆಲಸಗಳು ನಮಗೆ ಆನೆಬಲ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.