ಸಚಿವರು, ಶಾಸಕರಿಗೆ ಅಭಿನಂದನೆ ನಾಳೆ

ಬೀದರ್:ಸೆ.15: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೆ. 16 ರಂದು ಸಂಜೆ 6ಕ್ಕೆ ಸಚಿವರಾದ ಈಶ್ವರ ಖಂಡ್ರೆ, ರಹೀಂಖಾನ್, ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸುವರು. ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸುವರು.
ಶಾಸಕರಾದ ಪ್ರಭು ಚವಾಣ್, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಸಿದ್ಧಲಿಂಗಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ, ಶಶಿಲ್ ನಮೋಶಿ, ಭೀಮರಾವ್ ಪಾಟೀಲ, ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎಸ್. ಬಸವರಾಜ ಮುಖ್ಯ ಅತಿಥಿಗಳಾಗಿ, ಕಲಬುರಗಿ ಜಿಲ್ಲಾ ಅಧ್ಯಕ್ಷ ರಾಜು ಲೆಂಗಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಶೇಕ್ ಮಹೆಬೂಬ್ ಪಟೇಲ್, ರವೀಂದ್ರ ರಡ್ಡಿ ಮಾಲಿಪಾಟೀಲ, ಓಂಕಾಂತ ಸೂರ್ಯವಂಶಿ, ಭೀಮರಾವ್ ಹಡಪದ, ಸಾರಿಕಾ ಗಂಗಾ, ಶಿವರಾಜ ಕಪಲಾಪುರೆ, ಸಂಜೀವಕುಮಾರ ಸೂರ್ಯವಂಶಿ, ಪಾಂಡುರಂಗ ಬೆಲ್ದಾರ್, ಪ್ರಶಾಂತ ರಾಗಾ, ಸಂಗಶೆಟ್ಟಿ ಹಲಬುರ್ಗೆ ಅತಿಥಿಗಳಾಗಿ ಭಾಗವಹಿಸುವರು.
ಕಲಾವಿದೆ ಭಾನುಪ್ರಿಯ ಅರಳಿ ಸಂಗೀತ ನಡೆಸಿಕೊಡುವರು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.


22 ಪ್ರಶಸ್ತಿ ಪುರಸ್ಕøತ ಶಿಕ್ಷಕರು

ಕಾಲೇಜು ವಿಭಾಗ: ಪ್ರೊ. ಧನರಾಜ ಬಿರಾದಾರ, ಚಂದ್ರಕಾಂತ ಗಂಗಶೆಟ್ಟಿ.
ಪಾಲಿಟೆಕ್ನಿಕ್ ವಿಭಾಗ: ಡಾ. ಸಂತೋಷ ಪಿನ್ನಾ.
ಐಟಿಐ ವಿಭಾಗ: ಪ್ರಶಾಂತ ಜ್ಯಾಂತಿಕರ್.
ಪ್ರೌಢಶಾಲೆ: ಶಿವಲಿಂಗ ಹೇಡೆ, ಸುಧೀರ ರಾಗಾ, ಸತೀಶ, ಜಗದೇಶ, ಗಣೇಶ, ವೆಂಕಟರಾವ್, ಮುರಹರಿ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಶಿವಾಜಿ, ದತ್ತಾತ್ರೇಯ, ಸಾಯಮ್ಮ, ಸಂಜೀವಕುಮಾರ, ರಾಮಚಂದ್ರ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಗೀತಾ, ಶಿವಪ್ಪ, ಅನಿತಾ, ಆಫ್ರೀನ್ ಫಾತಿಮಾ, ರಾಜೇಶ್ವರಿ,
ಮಾರ್ತಂಡಪ್ಪ ತೆಳಗೇರಿ.