ಸಚಿವರುಗಳು ರೈತನ ಸಮಸ್ಯೆಗಳಿಗೆ ಮುಂದಾಗಲಿ : ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ

ಎಮ್ಮಿಗನೂರು, ಜ.09: ಸಚಿವರುಗಳು ರೈತರನ ಸಮಸ್ಯೆಗಳಿಗೆ ಅಲಿಸಲು ಮುಂದಾಗಬೇಕು ಎಂದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಹೇಳಿದರು.
ಸಮೀಪದ ಶ್ರೀನಿವಾಸ ಕ್ಯಾಂಪ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರ ಜನಪರ ಆಡಳಿತ ಮಾಡಿದೆ. ಆದರೆ ಬಿಜೆಪಿ ಸರಕಾರ ಸದ್ಯ ಜನರನ್ನು ಬೀದಿಗೆ ತಂದಿದೆ ಎಂದರು. ರೈತರು ಬೆಳೆದ ಬೆಳೆಗಳಿಗೆ ಆಂದ್ರದಲ್ಲಿ ಬೆಂಬಲಿತ ಬೆಲೆ ಇದೆ. ಅತರದ ಮಾದರಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮಿನವೇಷ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅಕಾಲಿಕ ಮಳೆಯಿಂದ ರೈತರು ಬೆಳೆದ ಮೆಣಿಸಿನಕಾಯಿ, ಜೋಳ, ಸಜ್ಜಿ ಇತರೆ ಭತ್ತಗಳು ನೀರು ಪಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂತಹ ಸಮಸ್ಯೆಗಳಿಗೆ ಸರಕಾರ ಪರಿಹಾರ ನೀಡಲು ಮುಂದಾಗಬೇಕು ಒತ್ತಾಯಿಸಿದರು. ಅಕಾಲಿಕ ಮಳೆಯಿಂದ ಬಿಳಿ ಮೆಣಿಸಿನಕಾಯಿ ಧರ 7000 ಇದ್ದಲ್ಲಿ ಕೇವಲ 1000 ರೂ ಕ್ಕೆ ಕುಸಿದಿದೆ. ಇತರದಿಂದ ರೈತರ ಮೇಲೆ ಬರೆ ಎಳೆದಂತಾಗಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ್ರೆ ಜನರಿಗೆ ಸಂವೃದ್ದಿ ಇಲ್ಲದಾಗಿದೆ ಎಂದು ವ್ಯಂಗ್ಯವಾಡಿದರು. ತಾಲೂಕಿನಲ್ಲಿ 12 ಗ್ರಾಪಂ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲಿವೆ. ಜೊತೆಗೆ ತಾಪಂ, ಜಿಪಂ ಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿ ಯಾಗುವುದರಲ್ಲಿ ಯಾವುದೇ ಅನುಮಾನ ವಿಲ್ಲ. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಲ್ಲ ತರದ ಸಿದ್ಧತೆ ಗಳು ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿಯಲ್ಲಿ ರೈತರು ಕೃಷಿ ಕಾಯಿದೆಗಳ ವಿರುದ್ಧ ನಿತ್ಯ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಸರಕಾರ ತೆಲೆ ಕೆಡಿಸಿಕೊಳ್ಳದೆ ನಿದ್ದೆ ಮಾಡುತ್ತಿದೆ. ಮಳೆ ಬಂದರೂ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ ಆದರೂ ಗಮನಹರಿಸದೇ ರೈತ ವಿರೋಧಿ ಸರಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಬ್ಯಾಂಕ್ ಗಳು, ನದಿ, ನೋಟ್ ಬ್ಯಾನ್ ಎಲ್ಲವನ್ನು ಮಾರಾಟ ಮಾಡಿದ್ರು ಇವಾಗ ದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆ ಎಂತಹ ಸರಕಾರ ನಡೆಸುತ್ತಿದ್ದಾರೆ. ಜನರೇ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜೆ. ಎನ್. ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಮುಖಂಡ ಓಂಕಾರಪ್ಪ, ನಾಗೇಶ್ವರರಾವ್, ಜಡೆಪ್ಪ, ಮುಷ್ಟಗಟ್ಟಿ ಹನುಮಂತಪ್ಪ ಸೇರಿದಂತೆ ಕಾರ್ಯಕರ್ತರು ಇದ್ದರು.