ಸಚಿವರಿಗೆ ತವರಲ್ಲಿ ಅದ್ದೂರಿ ಸನ್ಮಾನ

ಔರಾದ :ಮಾ.27: ಕರ್ನಾಟಕ ಸರ್ಕಾರದ ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರಿಗೆ ರಾಷ್ಟ್ರೀಯ ಸ್ಥಾನಮಾನ, ದೊರೆತಿದ್ದು ಸಚಿವರು ಬೆಂಗಳೂರಿನಿಂದ ತನ್ನ ತವರುರಿಗೆ ಆಗಮಿಸಿದ ಸಚಿವರಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿ ಸನ್ಮಾನಿಸಿದರು.

ಔರಾದ ನಗರಕ್ಕೆ ಆಗಮಿಸಿದ ಸಚಿವರು ಔರಾದ ಆರಾಧ್ಯ ದೈವ ಉದ್ಭವಲಿಂಗ ಶ್ರೀ ಅಮರೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಮಂದಿರದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು

ಮಾನ್ಯ ಪಶುಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರನ್ನು ರಾಷ್ಟ್ರೀಯ ಎಸ್.ಸಿ ಮೋರ್ಚಾ ವಿಶೇಷ ಆಹ್ವಾನಿತ ಸದಸ್ಯರಾಗಿ ನೇಮಕಗೊಂಡಿರುತ್ತಾರೆ. ಇದು ನಮ್ಮ ಔರಾದ ತಾಲ್ಲೂಕಿಗೆ ಹೆಮ್ಮೆಯ ಸಂಗತಿ ಎಂದು ಶುಭಕೋರುವ ಮೂಲಕ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಕಾರ್ಯಕರ್ತರು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪಂಚಾಯತ ಉಪಾದ್ಯಕ್ಷರಾದ ಸಂತೋಷ ಪೊಕಲವಾರ ,ಕೇರಬಾ ಪವಾರ, ಸದಸ್ಯರಾದ ಸಂಜುಕುಮಾರ ವಡಿಯಾರ, ಶ್ರೀನಿವಾಸ್ ಖೂಬಾ, ಬನಸಿ ಪವಾರ, ಅಶೋಕ ರೆಡ್ಡಿ, ಶಿವಾಜಿ ಬೊಗಾರ, ರಮೇಶ ಗೌಡ, ಬಸವರಾಜ ನಾಯ್ಕ, ಜಗನಾಥ ಚೀಟಮೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.