ಸಚಿವರಿಗೆ ಅಧಿಕಾರಿಗಳಿಂದಲೇ ಕಿಮ್ಮತ್ತಿಲ್ಲ

ಕೋಲಾರ,ಜ,೧೩-ಕೋಲಾರ ನಗರವನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಕೆ ಮಾಡುವ ಪ್ರಸ್ತಾಪಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಅದರೆ ಇದನ್ನು ಯಾವ ಮಾನದಂಡದ ಮೇಲೆ ನೀಡಲಾಗುತ್ತಿದೆ. ನಗರದಲ್ಲಿ ನಗರಸಭೆಯ ನಿಯಮಗಳನ್ನು ಅನುಷ್ಠನಕ್ಕೆ ತರುವಂತ ಕಾಳಜಿ ಇಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲದಿರುವಾಗ ಮಹಾನಗರಪಾಲಿಕೆಗೆ ಏಕರಿಕೆ ಮಾಡಿ ಬಾಯಿ ಬಡಿದು ಕೊಳ್ಳಬೇಕಾಷ್ಟೆ,
ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಕಾರ್ಮಿಕರು ಇಲ್ಲ. ನಗರದ ವಿಸ್ತೀರ್ಣತೆಗೆ ಅನುಗುಣವಾಗಿ ಕಾರ್ಮಿಕರು ಇಲ್ಲ. ಸೌಲಭ್ಯಗಳು ಇಲ್ಲದೆ ಇರುವಾಗ ಮಹಾನಗರಪಾಲಿಕೆಯನ್ನಾಗಿ ಮೇಲ್ದಾರ್ಜೆಗೆ ಏರಿಕೆ ಮಾಡಿ ಜನತೆಗೆ ಏನು ನೀಡಲಿದೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದಲ್ಲಿ ಸ್ವಚ್ಚತೆ ಎಂಬುವುದು ಕೇವಲ ಘೋಷಣೆ ಹಾಗೂ ಪ್ರಚಾರಕ್ಕೆ ಸೀಮಿತವಾಗಿದೆ ಹೊರತು ಕಾರ್ಯಗತವಾಗುತ್ತಿಲ್ಲ. ನಗರಸಭೆಯ ಅವರಣದಲ್ಲಿಯೇ ಸ್ವಚ್ಚತೆ ಎಂಬುವುದು ಇಲ್ಲ ಇನ್ನು ಇವರು ನಗರದ ೩೫ ವಾರ್ಡಗಳನ್ನು ಸ್ವಚ್ಚತೆಯಾಗಿ ಇಟ್ಟು ಕೊಳ್ಳಲು ಸಾಧ್ಯವೇ?
ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೊಸದಾಗಿ ಬಂದ ಹುಮ್ಮಸ್ಸಿನಲ್ಲಿ ಪ್ರಚಾರಕ್ಕಾಗಿ ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ಮಾಧ್ಯಮದವರನ್ನು ಆಹ್ವಾನಿಸಿ ಪುಕ್ಕಟೆ ಪ್ರಚಾರ ಗಿಟ್ಟುಪಡಿ ಕೊಂಡು ಒಂದೆರಡು ತಿಂಗಳು ಹಾರಡಿ ನಂತರ ಸಾರ್ವಜನಿಕರೇ ದೂರು ನೀಡಿದರೂ ಸಹ ಪಂಚೇಂದ್ರೀಯಗಳನ್ನು ಕಳೆದು ಕೊಂಡ ವಿಕಲ ಚೇತನರಂತೆ ಕಂಡು ಬರುತ್ತಿದ್ದಾರೆ.
ನಗರದಲ್ಲಿ ಆಡಳಿತದ ವೈಫಲ್ಯತೆಗಳ ಕುರಿತು ಹಲವಾರು ಭಾರಿ ಅವರ ಗಮನಕ್ಕೂ ತಂದರೂ ಸಹ ಅಧಿಕಾರಿಗಳು ಯಾವೂದೇ ಕ್ರಮ ಕೈಗೊಳ್ಳುವುದಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರ ಸಮ್ಮಖದಲ್ಲಿ ತಮ್ಮ ಅಧಿಕಾರವನ್ನು ಚಲಾವಣೆ ಮಾಡಿದರೂ ಸಹ ಅಧಿಕಾರಿಗಳು ಜೀ ಹುಜೂರ್ ಎನ್ನುತ್ತಾರೆ ಹೊರತು ಅವರ ಮಾತಿಗೆ ಕವಡೆ ಕಾಸಿನ ಮಾರ್ಯದೆಯನ್ನು ನೀಡುತ್ತಿಲ್ಲ ಎಂದರು.
ಕೆಲಸಗಳನ್ನು ಸಮರ್ಪಕವಾಗಿ ಮಾಡದ ದಂಡಪಿಂಡ ಅಧಿಕಾರಿಗಳ ಪರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೇ ವಕಾಲತ್ತು ಹಾಕುವ ಮೂಲಕ ಜನಪ್ರತಿನಿಧಿಗಳಿಗೆ ರಾಜಿ ಮಾಡುವ ಕೆಲಸಗಳು ಸಭೆಗಳಲ್ಲಿ ನಡೆಯುತ್ತಿದೆ. ಸಭೆಗಳಲ್ಲಿ ಸಚಿವರಿಗೆ ಅಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡುತ್ತಾರೆ ಇದು ಸಚಿವರಿಗೆ ತಿಳಿದರೂ ಸಹ ಯಾವೂದೋ ಒಂದು ಲಾಭಿಗೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕೊತಿರುವುದನ್ನು ಸಭೆಗಳಲ್ಲಿ ಕಂಡು ಬರುತ್ತಿತ್ತು.
ನಗರಸಭೆ ಆಡಳಿತ ನಡೆಸುವಂತ ಅಧಿಕಾರಿಗಳಿಗೆ ಮಾನ ಮಾರ್ಯದೆ ಎಂಬ ಪದಕ್ಕೆ ಅರ್ಥವೇ ತಿಳಿಯದಂತೆ ನೀನು ಏನು ಬೇಕಾದರೂ ಮಾಡಿಕೊ ಎಂದು ತೀರಿ ಕೊತು ಬಿಟ್ಟಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಸಚಿವರ ಸೂಚನೆಗಳನ್ನು ಸಹ ಗಾಳಿಗೆ ತೊರಿ ಬಿಡುವಷ್ಟು ಹದಗೆಟ್ಟು ಹೋಗಿದ್ದರೂ ಸಂಬಂಧ ಅಧಿಕಾರಿಗಳ ಮೇಲೆ ಯಾವೂದೇ ಕ್ರಮ ಕೈಗೊಳ್ಳದೆ ಇರುವುದೇ ಹಿರಿಯ ಅಧಿಕಾರಿಗಳ ನಿರ್ಲಕ್ಷತನವೇ ಕಾರಣವಾಗಿದೆ.
ಇಷ್ಟೊಂದು ಹದಗೆಟ್ಟ ನಗರಸಭೆಯನ್ನು ಸರ್ಕಾರವು ಮೇಲ್ಚರ್ಜೆಗೆ ಏರಿಕೆ ಮಾಡುವುದು ವ್ಯರ್ಥ ಹಾಗೂ ನಾಲಾಯಕ್ಕೂ ಅಗಿದೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.