ಸಚಿವರಿಂದ ಸ್ಮಾರ್ಟ್ಸಿಟಿ ಕಚೇರಿ ಲೋಕಾರ್ಪಣೆ

ದಾವಣಗೆರೆ,ಏ.೨೧: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ೧೫.೮೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರ್ಟ್ಸಿಟಿ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್  ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಇಷ್ಟು ದಿನಗಳ ಕಾಲ ಸ್ಮಾರ್ಟ್ಸಿಟಿ ಕಚೇರಿ ಬಾಡಿಗೆ ಕಟ್ಟದಲ್ಲಿ ನಡೆಯುತ್ತಿತ್ತು. ಆದರೆ, ಇಲ್ಲಿ ಈಗ ಕಚೇರಿ ಆಗಿರುವುದರಿಂದ ಬಾಡಿಗೆ ಹಣ ಉಳಿಯಲಿದೆ. ಇಂದು ಸಾಂಕೇತಿಕವಾಗಿ ಈ ಕಚೇರಿಯನ್ನು ಉದ್ಘಾಟಿಸಿದ್ದು, ಮುಂದೆ ಮುಖ್ಯಮಂತ್ರಿಗಳಿAದ ಇನ್ನೊಮ್ಮೆ ಲೋಕಾರ್ಪಣೆ ಮಾಡಿಸಲಾಗುವುದು ಎಂದರು.ಅತ್ಯುತ್ತಮ ಕಟ್ಟಡ ನಿರ್ಮಾಣವಾಗಿದ್ದು, ಈ ಕಟ್ಟಡ ಜಿಲ್ಲೆಗೆ ಗರಿಯಾಗಿದೆ ಎಂದರುಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಮಾರ್ಟ್ಸಿಟಿ ಎಂ.ಡಿ. ರವೀಂದ್ರಮಲ್ಲಾಪುರ ಮತ್ತಿತರರು ಹಾಜರಿದ್ದರು