ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ನರಗುಂದ,ಏ2:ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಸಿ. ಸಿ. ಪಾಟೀಲ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ತಾಲ್ಲೂಕಿನ ಹುಣಶೀಕಟ್ಟಿ, ಕಲಕೇರಿ, ಹಾಗೂ ಸುರಕೋಡ ಗ್ರಾಮಗಳಲ್ಲಿ 62, 75ಲಕ್ಷ ರೂ, ವೆಚ್ಚದ ಜಲಾಜೀವನ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಲಕೇರಿ, ಹುಣಶೀಕಟ್ಟಿ, ಸುರಕೋಡ ಗ್ರಾಮಗಳಲ್ಲಿ, ಬಸವೇಶ್ವರ ಸಮುದಾಯ ಭವನ ಯೋಜನೆಗೆ ಬೂಮಿಪೂಜೆ ನೆರವೇರಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಮ್, ಎಸ್, ಪಾಟೀಲ್, ಶಿವನಗೌಡ ಹೆಬ್ಬಳ್ಳಿ, ಏ,ಎಮ್, ಹುಡೇದ ಚಂದ್ರು ದಂಡಿನ ಗುರಪ್ಪ ಆದೆಪ್ಪನವರ, ಅನಿಲ್ ಧರೆಣ್ಣವರ್ ಉಪಸ್ಥಿತರಿದ್ದರು.