ಸಚಿವರಿಂದ ನವೀನ್ ನಾಡಗೌಡ ಅವರಿಗೆ ಸನ್ಮಾನ

ಮಾನ್ವಿ.ನ.19-ಕರ್ನಾಟಕ ಸರಕಾರದ ವಸತಿ ಸಚಿವರಾದ ವಿ ಸೋಮಣ್ಣ ಅವರು ನವೀನ್ ನಾಡಗೌಡ ಪೋತ್ನಾಳವರೆಗೆ ಸನ್ಮಾನಿಸಿದರು.
ಸಿಂಧನೂರಿನಲ್ಲಿ ಬುಧುವಾರ ಸಾಯಂಕಾಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ನವೀನ್ ನಾಡಗೌಡ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ತಾಲ್ಲೂಕು ಹೋಬಳಿ ಮಟ್ಟದ ಬಿಜೆಪಿ ಪಕ್ಷವನ್ನು ಬಲಪಡಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತರಬೇಕು.
ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿವೆ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ,ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆದಿಮನಿ ವೀರಲಕ್ಷ್ಮಿ,ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಅಮರೇಗೌಡ ವಿರುಪಾಪುರ, ಶಿವನಗೌಡ ಗೊರೇಬಾಳ,ಹಾಗೂ ಇನ್ನೂ ಉಪಸ್ಥಿತರು ಇದ್ದರು