ಸಚಿವರಿಂದ ಜಿಲ್ಲಾಡಳಿತ ದುರುಪಯೋಗ: ಸಂತೋಷ್ ಆರೋಪಿ

ಕೆ.ಆರ್.ಪೇಟೆ: ಜು.23:- ಸಚಿವ ಕೆ.ಸಿ.ನಾರಾಯಣಗೌಡ ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಖಾಸಗಿ ಕಾರ್ಯಕ್ರಮವನ್ನು ಮಾಡಿಕೊಂಡಿದ್ದು, ಜಿಲ್ಲಾಡಳಿತವನ್ನು ದುರುಪಯೋಗ ಮಾಡಿಕೋಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಬಸ್ ಸಂತೋಷ್‍ಕುಮಾರ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತ ಸಚಿವರ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಕಿಡಿಕಾರಿದರು. ಸಚಿವರÀ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ತೆರಿಗೆ ಹಣದಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಜನ ಬಂದಿಲ್ಲ, ದುಡ್ಡು ಕೊಟ್ಟು ಕರತಂದಿದ್ದಾರೆ. ಜಿಲ್ಲಾಡಳಿತ ಬಿಜೆಪಿ ಏಜೆಂಟ್‍ರಂತೆ ವರ್ತಿಸಿದೆ. ಅಧಿಕಾರಿ, ನೌಕರರನ್ನು ಬಿಜೆಪಿ ಕಾರ್ಯಕರ್ತರನ್ನಾಗಿ ಮಾಡಿದೆ. ನೌಕರರು ಮನಸ್ಸಿಲ್ಲದೆ ಅಧೀಕಾರಿಗಳ ಹೆದರಿಕೆಯಿಂದ ಕೆಲಸ ಮಾಡಿದೆ. ಶಿಕ್ಷಕರನ್ನು ಜನರನ್ನು ಕಾರ್ಯಕ್ರಮಕ್ಕೆ ಕರತರಲು ಶಿಕ್ಷಣ ಇಲಾಖೆ ನಿಯೋಜಿಸಿರುವುದು ಸಮಾಜ ತಲೆತಗ್ಗಿಸುವಂತದ್ದು. ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಜನರನ್ನು ಮನೆ ಬಾಗಲಿಗೆ ಹೋಗಿ ಕರತರುವಂತೆ ಮಾಡಿದೆ ಎಂದು ಕಿಡಿಕಾರಿದರು.
ಜೆಡಿಎಸ್‍ನಿಂದಲೂ ಕಾರ್ಯಕ್ರಮ ಮಾಡತ್ತೇವೆ. ನಾವು ದುಡ್ಡು ಕೊಟ್ಟು ಜನ ಕರೆಯೋ ಅಗತ್ಯ ಇಲ್ಲ. ಪಕ್ಷದಲ್ಲಿ ಸಾವಿರಾರು ಕಾರ್ಯಕರ್ತರು ಬರುತ್ತಾರೆ.
ಮಳೆಗಾಲ, ಕೃಷಿ ಚಟುವಟಿಕೆ ನಂತರ ಜೆಡಿಎಸ್ ಕಾರ್ಯಕ್ರಮ ರೂಪಿಸುತ್ತೇವೆ. ಜೆಡಿಎಸ್ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಜತೆಲಿ ನಾವಿದ್ದೇವೆ ಎಂದು ಹೇಳಿದರು. ಇತ್ತೀಚೆಗೆ ಸಚಿವ ಪೊಲೀಸರ ಮೂಲಕ ನಾಗರೀಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.
ಪೊಲೀಸರೇ ಸ್ಪೆಷಲ್ ರೌಡಿಗಳಾಗಿದ್ದಾರೆ. ನಾಗರೀಕರ ಜತೆ ಮಾನವೀಯತೆಯಿಂದ ವರ್ತಿಸುವಂತೆ ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜು ಮಾತನಾಡಿ, ಈ ಹಿಂದಿನ ಯಾವ ಶಾಸಕರೂ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಜನ ಕರ ತರಲು ಸರ್ಕಾರಿ ನೌಕರರನ್ನು ದುರುಪಯೋಗ ಪಡಿಸಿಕೊಂಡಿರಲಿಲ್ಲ. ಹೊಸ ಸಂಸ್ಕøತಿ ಹುಟ್ಟಿ ಹಾಕಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದ್ದಾರೆ. ತಹಸೀಲ್ದಾರ್ ಎಂ.ವಿ.ರೂಪ ಸಚಿವ ಹೇಳದಂತೆ ಎಜೆಂಟ್ ತರಹ ಕುಣಿಯಬಾರದು. ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ತಾಕೀತು ಮಾಡಿದರು. ಶಿಕ್ಷಕರನ್ನು ಜನ ಕರತರಲು ದುರಪಯೋಗ ಪಡಿಸಿಕೊಂಡಿರುವ ಹಿನ್ನಲೆ ಬಿಇಒ ವಿರುದ್ಧ ಶಿಕ್ಷಣ ಸಚಿವರಿಗೆ ದೂರು ನೀಡಿರುವುದಾಗಿ ತಿಳಿಸಿದರು. ಮೂರ ಬಾರೀ ಶಾಸಕರಾದರೂ ಜನ ಸೇರಿಸಲು ಶಿಕ್ಷಕರನ್ನು ಬಳಸಿಕೊಂಡಿದ್ದೀರಲ್ಲ. ನೀವು ಜನ ಸೇರಿಸಿ. ಜನ ಸೇರಿಸೋಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡತ್ತಿದ್ದೀರಿ. ನಿಮ್ಮ ನಾಯಕತ್ವದಲ್ಲಿ ಜನ ಸೇರತ್ತಿಲ್ವಲ್ಲ ಎಂದು ಸಚಿವರಿಗೆ ಟಾಂಗ್ ನೀಡಿದರು.
ತಾಲೂಕಿನ ಶಿಥಿಲಗೊಂಡಿರುವ ಶಾಲೆಗಳಿ ದುರಸ್ಥಿಗೆ ಮುಂದಾಗದೆ ಚೆನ್ನಾಗಿರುವ ಶಾಲೆಗಳ ದುರಸ್ಥಿಗೆ ತಮ್ಮ ಸಂಬಂಧಿಕರಿಗೆ ಐದು ಕೋಟಿ ಗುತ್ತಿಗೆಯನ್ನು ನೀಡಿ ಲೂಟಿ ಹೊಡೆಯಲು ಮುಂದಾಗಿದ್ದಾರೆ ಎಂದು ಸಚಿವರ ವಿರುದ್ಧ ಆರೋಪ ಮಾಡಿದರು. ತಾಲೂಕಿನಾದ್ಯಂತ ಕನ್ನಡಕ ಕೊಡಿಸಿರುವುದಾಗಿ ಸುಳ್ಳು ಹೇಳುತ್ತಿದ್ದೀರಿ. ಕನ್ನಡಕ ನೀಡಿದ್ದಾರೆ ಎಂದು ಮಲ್ಬಾರ್, ಅಟಿಕಾ ಗೋಲ್ಡ್ ಕಂಪನಿಯವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುತ್ತೀರಿ, ಅವರು ಕೊಟ್ಟ ಕನ್ನಡಕ ಆದ್ಮೇಲೆ ನಿಮ್ಮದೇನು. ನೀವೇನಾದರೂ ಈ ಹಿಂದೆ ಸೀರೆ ವ್ಯಾಪರ ಮಾಡತ್ತಿದ್ದರಾ? ಸೀರೆ ಹಂಚೋಕೆ ತಹಸೀಲ್ದಾರ್, ಎಸಿ ಶಿವನಂದಮೂರ್ತಿ ಅವರನ್ನು ಬಿಟ್ಟಿದ್ದೀರಿ. ಅಧಿಕಾರಿಗಳಿಗೆ ನಾಚಿಕೆ ಇಲ್ವಾ ಎಂದು ಕಿಡಿಕಾರಿದರು.
ಜಿಪಂ ಮಾಜಿ ಸದಸ್ಯ ರಾಮದಾಸ್, ಜೆಡಿಎಸ್ ಮುಖಂಡ ದರ್ಶನ್, ಗ್ರಾಪಂ ಸದಸ್ಯ ಸಾದ್ಗೋನಹಳ್ಳಿ ಕುಮಾರ್, ವಕೀಲ್ ಎಂ.ಎಲ್.ಸುರೇಶ್, ಜೆಡಿಎಸ್ ಯುವ ಮುಖಂಡರಾದ ಕೆ.ಟಿ.ಹರೀಶ್, ದರ್ಶನ್, ರಾಜು, ಅಶೋಕ್, ದೇವರಾಜು ಇದ್ದರು.