ಸಚಿವರಾದ ಡಾ ಎಚ್ ಸಿ ಮಹಾದೇವಪ್ಪ ರಾಜಕಾರಣದಲ್ಲಿರಲಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.08: ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ ಎಚ್ ಸಿ ಮಹಾದೇವಪ್ಪ ರಾಜ್ಯ ರಾಜಕಾರಣದಲ್ಲಿರಲಿ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಒತ್ತಾಯಿಸಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
 ಈಗಾಗಲೇ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ನೀಡುವ ಮೂಲಕ ಇಡೀ ರಾಜ್ಯದ ಶೋಷಿತ ಮತ್ತು ತುಳಿತಕ್ಕೊಳಪಟ್ಟಂತ ದಮನಿತರ ಸಮುದಾಯಗಳ ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಜಾರಿಗೆ ತಂದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದು ಕೊಡುವಂತಹ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ
ಒಂದು ವೇಳೆ ಸಚಿವ ಡಾಕ್ಟರ್ ಹೆಚ್ ಸಿ ಮಹಾದೇವಪ್ಪ ಇವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದೆ ಆದರೆ ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ದಲಿತ ಮತಗಳು ಅನಿವಾರ್ಯವಾಗಿ ಛಿದ್ರಗೊಂಡು ಹೋಗಿ ಪಕ್ಷಕ್ಕೆ ತುಂಬಾ ನಷ್ಟ ಅನುಭವಿಸುವ ಸಂಭವವಿದೆ ಮತ್ತು ಈ ಕುತಂತ್ರದ ವಿರುದ್ಧ ರಾಜ್ಯದ ಎಲ್ಲಾ ದಲಿತ ಸಮುದಾಯ ಸಂಘಟನೆಗಳು ಸೇರಿಕೊಂಡು ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ನಂದಿಹಾಳ್, ಜಿಲ್ಲಾಧ್ಯಕ್ಷ ಧರ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಹನುಮೇಶ ಕಟ್ಟಿಮನಿ, ಬಿ ಎಂ ಮಾರೆಪ್ಪ, ರಾಜ್ಯಾಧ್ಯಕ್ಷರು ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘ ಹೊನ್ನಳ್ಳಿಪ್ಪ ವಡ್ಡು ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಿಪಬ್ಲಿಕನ್  ಸೇನಾ ಶೇಖರಪ್ಪ ನಿರ್ದೇಶಕರು ಭೀಮರಾವ್ ಸ್ಟಡಿ ಸರ್ಕಲ್ ತರಬೇತಿ ಬಳ್ಳಾರಿ, ಮಲ್ಲಿಕಾರ್ಜುನ ಬಿ ಗೋನಾಳ್ ದಲಿತ ಮುಖಂಡ, ರಮೇಶ್ ಚಲವಾದಿ ಮಾವಿನಹಳ್ಳಿ ತಿಳಿಸಿದ್ದಾರೆ.