ವಿಜಯಪುರ :ಜೂ.25: ವಿಜಯಪುರ ಜಿಲ್ಲೆಯ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಸಂಘದ ವತಿಯಿಂದ ವಿಜಯಪೂರ ಜಿಲ್ಲಾ ಉಸ್ತುವಾರಿ ಸಚಿವರಾದ ಎಮ್.ಬಿ.ಪಾಟೀಲ್ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಶಿವಾನಂದ ಪಾಟೀಲ್ ಹಾಗೂ ನಾಗಠಾಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ವಿಠ್ಠಲ್ ಕಟಕಧೋಂಡ ಇವರಿಗೆ ಸಮಸ್ತ ಹಾಲುಮತ ಧರ್ಮದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಸಂಘದ ವತಿಯಿಂದ ಕಂಬಳಿ ಹೂಮಾಲೆ ಹಾಕುವುದರಿಂದ ಸನ್ಮಾನಿಸಲಾಯಿತು.
ಅದರಂತೆ ರಾಜ್ಯದ ಎಲ್ಲಾ ಪಟ್ಟದ ಪೂಜಾರಿಗಳಿಗೆ ಜಡೆ ತಲೆ ಪೂಜಾರಿಗಳಿಗೆ ಗೌರವ ಧನವನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಲಾಯಿತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚುನಾವಣೆ ಪೂರ್ವದಲ್ಲಿ ವಿಜಯಪುರದ ಯಾತ್ರಿ ನಿವಾಸದಲ್ಲಿ ಪಟ್ಟದ ಪೂಜಾರಿಗಳಿಗೆ ಹಾಗೂ ಜಡೆತಲೆ ಪೂಜಾರಿಗಳು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದಾಗ ನಮ್ಮ ಸರ್ಕಾರ ಬಂದರೆ ಖಂಡಿತವಾಗಿಯೂ ಎಲ್ಲಾ ಪೂಜಾರಿಗಳಿಗೆ ಗೌರವಧನವನ್ನು ಒದಗಿಸಿಕೊಡುತ್ತೇನೆಂದು ಭರವಸೆಯನ್ನು ಕೊಟ್ಟಿದ್ದರು. ಆದ್ದರಿಂದ ಜಿಲ್ಲೆಯ ಸಚಿವರುಗಳು ಶಾಸಕರುಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಮಗೆ ನಮ್ಮ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗುವುದರಿಂದ ತಾವು ನಮಗೆ ಗೌರವಧನವನ್ನು ನೀಡಬೇಕು ಹಾಗೂ ರಾಜ್ಯಾದ್ಯಂತ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಲಾಯಿತು.
ರಾಜ್ಯದ ಹಾಲುಮತ ಧರ್ಮದ ಪಟ್ಟದ ಪೂಜಾರಿಗಳು ಜಡೆ ತಲೆ ಪೂಜಾರಿಗಳು ವಂಶ ಪರಂಪರೆ ವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ ಇವರಿಗೆ ಯಾವುದೇ ತರದಿಂದ ಆರ್ಥಿಕ ಮೂಲ ಇರುವುದಿಲ್ಲ. ಅದೇ ರೀತಿಯಾಗಿ ಜಿಲ್ಲೆಯಲ್ಲಿ ಎಲ್ಲರಿಗೂ ಸರ್ಕಾರದಿಂದ ಗೌರವ ಧನವನ್ನು ಮಾಡಿಸಿಕೊಡಬೇಕೆಂದು ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೀರಪ್ಪ ಜುಮುನಾಳ. ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ. ಸಂಘದ ಅಧ್ಯಕ್ಷರಾದ ನಾಗಠಾಣದ ಮಾಳಿಂಗರಾಯ ಮಾರಾಯರು ಬನಸಿದ್ದ ಮಾರಾಯರು .ರೂಗಿ ಜಟ್ಟಿಂಗೇಶ್ವರ ದೇವಸ್ಥಾನದ ಮಲ್ಲಪ್ಪ ಮಾರಾಯರು ಬರಟ್ಟಿಗೆ ಬಾಳು ಮಾಮ ದೇವಸ್ಥಾನದ ಶಂಕರ್ ಮಾರಾಯರು, ತೊರವಿ ಅಮೀನಪ್ಪ ಮಾರಾಯರು, ಅಮೋಘಿದ್ದ ಮಾರಾಯರು, ಬೀರೇಶ್ ಮಾರಾಯರು, ನಿಂಗಪ್ಪ ಮಾರಾಯರು, ಕಲ್ಲಪ್ಪ ಮಾರಾಯರು, ಕನಮುಚ್ಚನಾಳ ಎಲ್ಲಪ್ಪ ಮಾರಾಯರು, ಕಲೇಬಾಗ ಬೀರಪ್ಪ ಕಣಿಮಣಿ ಮಾರಾಯರು, ಶಿವರಾಯ್ ಮಾರಾಯರು, ಅಲಿಯಾಬಾದ್ ನಿಂಗಪ್ಪ ಪೂಜಾರಿ ಮಾರಾಯರು, ಎಲ್ಲಪ್ಪ ಪೂಜಾರಿ ಮಾರಾಯರು, ಸಾರವಡದ ಜೊತೆಪ್ಪ ಮಾರಾಯರು, ತಿಪ್ಪರಾಯ ಬಿರಾದಾರ ಮಾರಾಯರು ಹಾಗೂ ಸುಮಾರು 80ಕ್ಕೂ ಹೆಚ್ಚು ಮಾರಾಯರು ಉಪಸ್ಥಿತರಿದ್ದರು.