ಸಚಿವದ್ವಯರಿಗೆ ಕ್ರಿಶ್ಚಿಯನ್ ಸಂಘಟನೆಗಳಿಂದ ಸನ್ಮಾನ

ಬೀದರ್: ಜೂ.5:ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಫೋರಂ ವತಿಯಿಂದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂಖಾನ್ ಅವರನ್ನು ಹೈದರಾಬಾದ್‍ನಲ್ಲಿ ಸನ್ಮಾನಿಸಲಾಯಿತು.

ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ಶಾಲು ಹೊದಿಸಿ ಸನ್ಮಾನಿಸಿದರು.

ಮುಖಂಡರಾದ ಜೀವನ್ ಚಿದ್ರಿ, ಶಾಂತಕುಮಾರ ಗುಮ್ಮೆ, ರಮೇಶಕುಮಾರ ಮಾಳಗೆ, ಜಾಕೋಬ್ ಮುಸ್ತಾಪುರಕರ್ ಮತ್ತಿತರರು ಇದ್ದರು