ಸಚಿನ್ ಪೈಲೆಟ್ ಹೊಸಪಕ್ಷ ಬಹುತೇಕ ಖಚಿತ:ಪ್ರಗತಿಶೀಲ ಕಾಂಗ್ರೆಸ್ ಜೂ.11ಕ್ಕೆ ಘೋಷಣೆ

ಜೈಪುರ,ಜೂ.6- ರಾಜಸ್ತಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮುನ್ನವೇ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಮಾಜಿ ಉಪ ಮುಖ್ಯಮತ್ರಿ ಸಚಿನ್ ಪೈಲೆಟ್ ನಡುವೆ ನಡೆದಿರುವ ಸಂಘರ್ಷ ತಾರ್ಕಿಕ ಅಂತ್ಯಕ್ಕೆ ಬಂದಿದ್ದು ಸಚಿನ್ ಹೊಸ ಪಕ್ಷ ರಚನೆಗೆ ಮುಂದಾಗಿದ್ದಾರೆ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪ್ರಗತಿಶೀಲ ಕಾಂಗ್ರೆಸ್ ಹೆಸರಿನೊಂದಿಗೆ ತಮ್ಮ ಹೊಸ ಪ್ರಾದೇಶಿಕ ಪಕ್ಷದ ವಿವರಗಳನ್ನು ಅಂತಿಮಗೊಳಿಸುತ್ತಿದ್ದಾರೆ ಅವರ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಾದ ಜೂನ್ 11 ರಂದು ಹೊಸ ಪಕ್ಷ ಆರಂಭಿಸಲಿದ್ದಾರೆ ಎನ್ನಲಾಗಿದೆ.

2020ರ ಜುಲೈ ನಿಂದ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಿದ್ದಾರೆ ಮತ್ತು ಹಲವಾರು ಬಾರಿ ಉನ್ನತ ಹುದ್ದೆಗೆ ಹಕ್ಕು ಸಾಧಿಸಿ ವಿಫಲರಾದ ಹಿನ್ನೆಲೆಯಲ್ಲಿ ಹೊಸ ಪಕ್ಷ ರಚನೆಗೆ ಮುಂದಾಗಿದ್ದಾರೆ.

2020 ರಲ್ಲಿ, ಸಚಿನ್ ಪೈಲೆಟ್ ಶಾಸಕಾಂಗ ಸಭೆಯ 30 ಸದಸ್ಯರ ಬೆಂಬಲದೊಂದಿಗೆ ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದರು. ಆದರೂ ಸಚಿನ್ ಪೈಲಟ್ ಕೇವಲ 19 ಶಾಸಕರ ಬೆಂಬಲ ಪಡೆಯಲು ಸಾದ್ಯವಾಗಿತ್ತು. ಆ ನಂತರ ಉಪ ಮುಖ್ಯಮಂತ್ರಿ ಹಾಗು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.

ಈ ವರ್ಷದ ಆರಂಭದಲ್ಲಿ, ಏಪ್ರಿಲ್ 11 ರಂದು, ವಸುಂಧರಾ ರಾಜೆ ಅವರ ಸರ್ಕಾರದ ಭ್ರಷ್ಟಾಚಾರ ಮತ್ತು ಗೆಹ್ಲೋಟ್ ಆಡಳಿತದ ನಿಷ್ಕ್ರಿಯತೆಯ ವಿರುದ್ಧ ಪೈಲಟ್ ಒಂದು ದಿನದ ಉಪವಾಸ ಕೈಗೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮಾಜಿ ಕಮಿಷನರ್ ಲಲಿತ್ ಮೋದಿ ವಿರುದ್ಧವೂ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು.

ಮೇ 11 ರಂದು,ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ಹಿಡಿಯಲು ಅಜ್ಮೀರ್‍ನಿಂದ ಜೈಪುರದವರೆಗೆ 125 ಕಿಮೀ ಉದ್ದದ “ಪಾದಯಾತ್ರೆ” ಕೈಗೊಂಡರು. ಆರೋಪಗಳನ್ನು ತನಿಖೆ ಮಾಡಲು ಅವರು ಗೆಹ್ಲೋಟ್ ಆಡಳಿತಕ್ಕೆ 15 ದಿನಗಳ ಗಡುವನ್ನು ನೀಡಿದರು ಅಥವಾ ಅವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.