“ಸಗರನಾಡು ಸೌರಭ” ರಾಜ್ಯಮಟ್ಟದ ಪ್ರಶಸ್ತಿಗೆ-ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ,ಜನಪದ ಕಲಾವಿದ ಬಾಬುಮಿಯಾ ಪುಲಾರಿ ಆಯ್ಕೆ

ಕಲಬುರಗಿ,ಜ 8:ಸಗರನಾಡು ಕ್ಷೇಮಾಭಿವೃದ್ಧಿ ಸಂಘವು ಪ್ರತಿವರ್ಷದಂತೆ ಈ ವರ್ಷವು 2022ನೇ “ಸಗರನಾಡು ಸೌರಭ” ರಾಜ್ಯಮಟ್ಟದ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ. ಜಾನಪದ ವಿದ್ವಾಂಸ ಲಿಂ. ಪ್ರೊ. ಸೂಗಯ್ಯ ಹಿರೇಮಠ ಅವರ ಸ್ಮರಣಾರ್ಥವಾಗಿ ಜೀವಮಾನ ಸಾಧನೆಗೆ ನೀಡುವ ಈ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ ಕುಲಕರ್ಣಿಯವರ ಕನ್ನಡ ಸಾಹಿತ್ಯ ಮತ್ತು ಜಾನಪದ ಸೇವೆಯನ್ನು ಗುರುತಿಸಿ ಆಯ್ಕೆ ಸಮಿತಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾಗೆಯೇ ಜಾನಪದ ಕಲೆ ಸಾಧಕ ಪ್ರಶಸ್ತಿಗೆ ಜನಪದ ರಂಗಭೂಮಿ ಕಲಾವಿದರಾದ ಅಫಜಲಪೂರ ತಾಲ್ಲೂಕಿನ ಮಾಶಾಳ ಗ್ರಾಮದ ಜನಪದ ಕಲಾವಿದರಾದ ಶ್ರೀ ಬಾಬುಮಿಯಾ ಪುಲಾರಿ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ. 5000/- ಗೌರವ ಧನ, ಪ್ರಶಸ್ತಿ ಫಲಕ ಹೊಂದಿರುತ್ತದೆ.
2022ನೇ ಸಾಲಿನ ಸಗರನಾಡು ಸೌರಭ ಗೌರವ ಪ್ರಶಸ್ತಿ ಪುರಸ್ಕøತರು
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶ್ರೀ ಶಾಂತಪ್ಪ ಬೂದಿಹಾಳ, ಪ್ರೊ. ಎಸ್.ಎಲ್.ಪಾಟೀಲ, ಪ್ರೊ. ಗಿರಿಮಲ್ಲಪ್ಪ ಹರವಾಳ, ಪ್ರೊ. ಬಿ.ಎಸ್. ಮಿಟೇಕರ, ಶ್ರೀ ಎಂ.ಬಿ. ನಿಂಗಪ್ಪ ಪ್ರಶಸ್ತಿ ಪುರಸ್ಕøತರಾಗಿದ್ದು, ಇವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 20.01.2023ರಂದು ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡದಲ್ಲಿ ಜರುಗುವುದ ಎಂದು ಸಂಘದ ಗೌರವಾಧ್ಯಕ್ಷರಾದ ಪ. ಮಾನುಸಗರ ಅವರು ತಿಳಿಸಿದ್ದಾರೆ.