
ಸಂಜೆವಾಣಿ ವಾರ್ತೆ
ಯಲಬುರ್ಗಾ, ಏ.25: ಮೆ.10 ರಂದು ನಡೆಯಲಿರುವ 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣೆಯ ಇವಿಎಂ ಹಾಗೂ ವಿವಿಪ್ಯಾಟ್ ಸಂಗ್ರಹಿಸಿ ಇಡಲಾದ ಸ್ಟ್ರಾಂಗ್ ರೂಮ್ ಹಾಗೂ ಯಲಬುರ್ಗಾ ಪಟ್ಟಣದ ಸಖಿ ಮತಗಟ್ಟೆಯನ್ನು ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ವಿ.ಸಂಪತ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ., ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ ಚೌಗಲೆ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೊಷ ಪಾಟೀಲ್ ಬಿರಾದಾರ್, ಪಟ್ಟಣ ಪಂಚಾಯತ ಇಂಜಿನಿಯರ್, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.