ಸಖಿ ಮತದಾನ ಕೇಂದ್ರ:ಸಸಿ ವಿತರಣೆ

ರಾಯಚೂರು.ಏ೧೭-ಮಸ್ಕಿ ಉಪ ಚುನಾವಣೆಯ ಮತದಾನ ಪ್ರಕ್ರಿಯೆಯು ಇಂದು ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ಸಖಿ ಮತಗಟ್ಟೆಯಲ್ಲಿ ಮಾತದಾನ ಮಾಡಿದ ಮಹಿಳೆಗೆ ಚುನಾವಣಾ ಅಧಿಕಾರಿ ಸಸಿ ನೀಡಿ ಸ್ವಾಗತಿಸಿದರು.
ಜಿಲ್ಲೆಯಲ್ಲಿ ತೀವ್ರ ಕುಲಹಲ ಮೂಡಿಸಿದ ಮಸ್ಕಿ ಉಪಚುನಾವಣೆಯು ಇಂದು ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಮಸ್ಕಿ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಸಖಿ ಮತದಾನ ಕೇಂದ್ರವನ್ನು ಹೂ, ತೋರಣಗಳಿಂದ ಜಿಲ್ಲಾಡಳಿತ ಶೃಂಗಾರ ಮಾಡಿದ್ದು ಪ್ರಥಮವಾಗಿ ಕುಮಾರಿ ಅಕ್ಷತಾ ಅವರು ಮತದಾನ ಮಾಡಿದ್ದು ಅವರಿಗೆ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಅವರು ಸಸಿ ನೀಡುವುದರ ಮೂಲಕ ಸ್ವಾಗತಿಸಿದರು.