ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರಕ್ಕೆ ಉತ್ತಮ ಫಲಿತಾಂಶ

ಕಲಬುರಗಿ:ಮಾ.12: ಗುಣಮಟ್ಟದ ಕಂಪ್ಯೂಟರ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ ಗಣಕಯಂತ್ರ ಶಿಕ್ಷಣ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಕಳೆದ ಜನವರಿಯಲ್ಲಿ ಏರ್ಪಡಿಸಿದ್ದ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಶೇ.94.19 ಫಲಿತಾಂಶ ದೊರೆತಿದೆ ಎಂದು ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 241 ವಿದ್ಯಾರ್ಥಿಗಳಲ್ಲಿ, 227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 24 ವಿದ್ಯಾರ್ಥಿಗಳಾದ ರೇಣುಕಾ ಇ(ಶೇ.91), ಸಂತೋಷ ಬಿ(ಶೇ.90), ಕುಶಾಲ್ ಎಸ್(ಶೇ.89), ಕೀರ್ತಿ ಪಿ(ಶೇ.89), ಭಾಗ್ಯಶ್ರೀ ಎಸ್.(ಶೇ.88), ಅಶ್ವಿನಿ ಎಂ(ಶೇ.86.5), ಸುನಂದಾ ಡಿ(ಶೇ.86.5), ಭಾಗ್ಯಶ್ರೀ ಎಸ್.(ಶೇ.86.5), ಪ್ರೇಮಾಂಜಲಿ ಆರ್(ಶೇ.86), ರಂಜಿತಾ ಆರ್(ಶೇ.86), ಶ್ರೀದೇವಿ(ಶೇ.85.5), ನೀಲಾಂಬಿಕಾ ಜಿ(ಶೇ.85.5), ಪ್ರಿಯಾಂಕಾ ವಿ.(ಶೇ.85.5), ಭಾಗ್ಯಶ್ರೀ ಎಂ(ಶೇ.85.5), ನಾಗರಾಜ ಎಂ(ಶೇ.85.5), ಭಾಗ್ಯಲಕ್ಷ್ಮೀ(ಶೇ.85.5),ಲಕ್ಷ್ಮೀ ಜಿ(ಶೇ.85.5), ರೋಹನ್ ಎಸ್(ಶೇ.85), ಅಂಬಿಕಾ ಆರ್(ಶೇ.85), ಅಶ್ವಿನಿಎಲ್(ಶೇ.85), ಶಿಲ್ಪಾ ಸಿ(ಶೇ. 85), ಶಿಲ್ಪಾ ಎಸ್(ಶೇ.85), ಕಾವ್ಯ ಎಂ(ಶೇ.85), ಐಶ್ವರ್ಯ ಬಿ(ಶೇ.85) ಅವರು ಡಿಸ್ಟಿಂಕ್ಷನ್‍ನಲ್ಲಿ ಉತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಸೈಯದ್ ಹಮೀದ್, ಲಕ್ಷ್ಮೀ ಸುತಾರ, ಸಾನಿಯಾ ಶೇಖ್, ನೀಲೊಫರ್ ಶೇಖ್, ಪೂಜಾ ಜಮಾದಾರ, ಪಾಯಲ್ ಹಿಬಾರೆ, ಐಶ್ವರ್ಯ ಬಿರಾದಾರ, ಅಂಬಿಕಾ, ಶೃತಿ ಚವ್ಹಾಣ, ಸೋಹೆಲ್ ಶೇಖ್ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗವು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಲಾಗಿದೆ.