ಸಕ್ಷಮ ಜಿಲ್ಲಾ ಮಟ್ಟದ ಸಭೆ

ಕಲಬುರಗಿ: ಮಾ.8:ವಿಶೇಷಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಮದೃಷ್ಟಿ ಕ್ಷಮತಾ ವಿಕಾಸ ಹಾಗೂ ಅನುಸಂದಾನ ಮಂಡಲ (ಸಕ್ಷಮ)ದ ಉತ್ತರ ಕರ್ನಾಟಕ ಪ್ರಾಂತದ ಕಲಬುರಗಿ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಪಧಾದಿಕಾರಿಗಳ ನೇಮಕ ಮಾಡಲು ಜಿಲ್ಲಾ ಮಟ್ಟದ ಸಭೆ ಭಾನುವಾರ ಮಾ.10ರಂದು ಬೆಳಿಗ್ಗೆ 10:30 ಗಂಟೆಗೆ ನಗರದ ಕನ್ನಡ ಭವನದಲ್ಲಿ ಜರುಗಲಿದೆ. ಸಭೆಗೆ “ಸಕ್ಷಮ” ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಸಿಎ ಎಸ್.ಬಿ ಶೆಟ್ಟಿ ಹಾಗೂ ಕಾರ್ಯದರ್ಶಿ ಡಾ. ಸುಭಾಸ್ ಬಬ್ರುವಾಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ವಿಶೇಷಚೇತನರು ಸಭೆಯಲ್ಲಿ ಭಾಗವಹಿಸಬೇಕೆಂದು ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.