ಸಕ್ರೆಬೈಲು ಮರಿಯಾನೆಗೆ ಪುನೀತ್ ರಾಜ್‍ಕುಮಾರ್ ಹೆಸರು!


ಶಿವಮೊಗ್ಗ, ನ. 11;  ಶಿವಮೊಗ್ಗ ತಾಲೂಕು ಸಕ್ರೆಬೈಲು‌ ಆನೆ ಬಿಡಾರದ ‘ಅಭಿಮನ್ಯು’ ಹೆಸರಿನ ಆನೆ ಮರಿಗೆ ಖ್ಯಾತ ಚಿತ್ರನಟ ,ಇತ್ತೀಚೆಗೆ ವಿಧಿವಶರಾದ ಪುನೀತ್ ರಾಜಕುಮಾರ್ ಅವರ ಹೆಸರು ನಾಮಕರಣ ಮಾಡಲಾಗಿದೆ.  ಕಳೆದ ಕೆಲ ತಿಂಗಳುಗಳ ಹಿಂದೆ ಪುನೀತ್ ರಾಜಕುಮಾರ್ ರವರು ಸರ್ಕಾರಿ ಜಾಹೀರಾತೊಂದರ ಚಿತ್ರೀಕರಣಕ್ಕಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದರು. ಈ ವೇಳೆ  ‘ಅಭಿಮನ್ಯು’ ಮರಿಯಾನೆಯ ತುಂಟಾಟಕ್ಕೆ ಮನಸೋತಿದ್ದರು. ಅದರ ಜೊತೆ ಸಾಕಷ್ಟು ಅನ್ಯೋನ್ಯತೆ ಹೊಂದಿದ್ದರು. ಈ ಕಾರಣದಿಂದ ಅರಣ್ಯ ಇಲಾಖೆಯು ಮರಿಯಾನೆಗೆ ಪುನೀತ್ ರಾಜಕುಮಾರ್ ಹೆಸರು ಮರು ನಾಮಕರಣ ಮಾಡಿದೆ. ಈ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ನಡೆಸಿದೆ.