ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಆಂದೋಲನ ಅ. 15ರ ವರೆಗೆ

ಯಡ್ರಾಮಿ:ಜು.28: ತಾಲ್ಲೂಕಿನ ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಅಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಆಂದೋಲನ ಕಾರ್ಯಕ್ರಮ ಅಯ್ಕೆಗೊಂಡ ಗ್ರಾಮದಲ್ಲಿ ಮನೆ ಮನೆ ಭೇಟಿ ನೀಡಿ ಸಕ್ರಿಯವಾಗಿ ಕ್ಷಯರೋಗದ ಅರಿವು ಮೂಡಿಸುವುದರ ಜೊತೆಗೆ ಕಫದ ಮಾದರಿ ಸಂಗ್ರಹ ಸಂಶಯಾಸ್ಪದ ಲಕ್ಷಣಗಳು ಇದ್ದವರ ಕಫ ಸಂಗ್ರಹಿಸಿ ಆರೋಗ್ಯ ಕೇಂದ್ರದ ಲ್ಯಾಬೋರೇಟರಿಯಲ್ಲಿ ಉಚಿತ ಕಫ ಪರೀಕ್ಷೆ ಜೊತೆಗೆ ಉಚಿತ ಎಕ್ಸರೆ / ಮಾತ್ರೆಗಳು ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ಡಿ ಅರ್ ಟಿಬಿ ಟಿಸ್ ಸಮಾಲೋಚಕ ಮಂಜುನಾಥ ಕಂಬಳಿಮಠ ಜಿಲ್ಲಾ ಮಟ್ಟದ ಕ್ಷೇತ್ರ ಭೇಟಿ ಸಂಧರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆ ಮಾಡಿದರು.
ಯಡ್ರಾಮಿ ಹಿರಿಯ ಕ್ಷಯರೋಗ ಮೇಲ್ವಿಚಾರಕ .ಆನಂದ ದೊಡ್ಡಮನಿ , ಆರೋಗ್ಯ ನೀರಿಕ್ಷಾಣಧಿಕಾರಿ ಅಮರೇಶ ಕಾಂಬಳೆ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರಜನಿ,

ಆಶಾ ಕಾರ್ಯಕರ್ತೆ ಸಂಗೀತ. ಗ್ರಾಮದ ಜನರು ಸಕ್ರಿಯವಾಗಿ ಮಾಹಿತಿ ನೀಡಿದರು.