ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ

ಯಡ್ರಾಮಿ: ಆ.6:ತಾಲ್ಲೂಕಿನ ಅಂಕಲಗ ಪ್ರಾಥಮಿಕ ಆರೋಗ್ಯ ಕೇಂದ್ರ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಅಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಆಂದೋಲನ ಕಾರ್ಯಕ್ರಮ ಅಯ್ಕೆಗೊಂಡ ಗ್ರಾಮದಲ್ಲಿ ಎರಡು ತಂಡಗಳಂತೆ ರಚನೆ ಮಾಡಿ ಮನೆ ಮನೆ ಸಕ್ರಿಯವಾಗಿ ಕ್ಷಯರೋಗದ ಅರಿವು ಮೂಡಿಸುವುದರ ಜೊತೆಗೆ ಕಫದ ಮಾದರಿ ಸಂಗ್ರಹ ಸಂಶಯಾಸ್ಪದ ಲಕ್ಷಣಗಳು ಇದ್ದವರ ಕಫ ಸಂಗ್ರಹಿಸಿ ಆರೋಗ್ಯ ಕೇಂದ್ರದ ಲ್ಯಾಬೋರೇಟರಿಯಲ್ಲಿ ಉಚಿತ ಪರೀಕ್ಷೆ ಜೊತೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ಡಿ ಅರ್ ಟಿಬಿ ಟಿಸ್ ಸಮಾಲೋಚಕ ಮಂಜುನಾಥ ಕಂಬಳಿಮಠ ಜಿಲ್ಲಾ ಮಟ್ಟದ ಕ್ಷೇತ್ರ ಭೇಟಿ ಸಂಧರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆ ಮಾಡಿದರು.
ಯಡ್ರಾಮಿ ಹಿರಿಯ ಕ್ಷಯರೋಗ ಮೇಲ್ವಿಚಾರಕ .ಆನಂದ ದೊಡ್ಡಮನಿ, ಶುಶ್ರೂಷಕರ ಅಧಿಕಾರಿ ಶಿವಪ್ಪ ತಳವಾರ. ಎಲ್ ಹೆಚ್ ವಿ ಸುನಂದಾ ಮಾಂಗವಾಡಿ, ಪ್ರಯೋಗಶಾಲಾ ತಜ್ಞ ಹಣಮತರಾಯ,
ಆಶಾ ಕಾರ್ಯಕರ್ತೆ ಲತಾ, ಯಾಸ್ರೀನ್, ಜ್ಯೋತಿ, ಸರೂಬಾಯಿ . ಮತ್ತು ಕೆ ಹೆಚ್ ಪಿಟಿ ಕಾರ್ಯಕರ್ತರಾದ ಸಾವಿತ್ರಿ, ಶ್ರೀಕಾಂತ, ಗ್ರಾಮದ ಜನರು ಸಕ್ರಿಯವಾಗಿ ಮಾಹಿತಿ ನೀಡಿದರು.