ಸಕ್ರಿಯ ಪ್ರಕರಣ ಇಳಿಕೆ

ನವದೆಹಲಿ, ಮೇ ೨೬-ದೇಶದಲ್ಲಿ ನಿನ್ನೆ ೨ ಲಕ್ಷಕ್ಕಿಂತ ಕಡಿಮೆ ದಾಖಲಾಗಿದ್ದ ಕೊರೊನಾ ಸೋಂಕು ಪ್ರಕರಣ ಇಂದು ಮತ್ತೆ ೨.೦೮ ಲಕ್ಷ ಗಡಿ ದಾಟಿದೆ.ಜೊತೆಗೆ ಸಾವಿನ ಸಂಖ್ಯೆ ೪ ಸಾವಿರ ದಾಟುವ ಮೂಲಕ ಸೋಂಕು ಮತ್ತು ಸಾವಿನ ಸಂಖ್ಯೆ ದಿನನಿತ್ಯ ಹಾವು ಏಣಿ ಆಟ ಆಡುತ್ತಿದೆ.
ದಿನದಿಂದ ದಿನಕ್ಕೆ ಕೋರೊನಾ ಸೋಂಕು ಸಂಖ್ಯೆ ಏರಿಕೆ ಮತ್ತು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಸಿತ ಕಂಡಿದ್ದ ಚೇತರಿಕೆ ಪ್ರಮಾಣ ಶೇ.೮೯.೬೬ ಕ್ಕೆ ಹೆಚ್ಚಳವಾಗಿದೆ.
ಪ್ರತಿವಾರದ ಕೊರೊನಾ ಪಾಸಿಟಿವ್ ಪ್ರಕರಣ ಶೇಕಡ ೧೧.೪೫ ರಷ್ಟು ಇದ್ದು ಪ್ರತಿದಿನದ ಪಾಸಿಟೀವ್ ಪ್ರಮಾಣ ಶೇ.೯.೪೨ ಕ್ಕೆ ಕುಸಿದಿದೆ. ಕಳೆದ ಎರಡು ದಿನಗಳಿಂದ ಈಚೆಗೆ ಶೇಕಡ ಹತ್ತಕ್ಕೂ ಕಡಿಮೆ ಸೋಂಕು ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ನಿನ್ನೆ ಒಂದೇ ದಿನ ೨೨.೧೭ ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದ್ದು ಇದುವರೆಗೆ ೨೦ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ.

ಕುಸಿದ ಸಕ್ರಿಯ ಪ್ರಕರಣ:

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಇಳಿಕೆಯಾಗುತ್ತಿರಿವ ಹಿ?ಙನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗಿದೆ.ಸದ್ಯ ದೇಶದಲ್ಲಿ ೨೪,೯೫,೫೯೧ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ.

ದಿನನಿತ್ಯ ಸೋಂಕು ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಕುಸಿತ ಕಂಡಿದೆ

೨.೦೮ ಲಕ್ಷ ಪ್ರಕರಣ:

ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ೨.೦೮,೯೨೧ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೪,೧೫೭ ಮಂದಿ ಮೃತಪಟ್ಟಿದ್ದಾರೆ .ಅಲ್ಲದೆ ೨,೯೫,೯೫೫ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ೨,೭೧,೫೭,೭೯೫ ಮಂದಿಗೆ ಸೋಂಕು ಏರಿಕೆಯಾಗಿದೆ.

ದೇಶದಲ್ಲಿ ಇದುವರೆಗೆ ,೨,೪೫,೫೦,೮೧೬ ಮಂದಿ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಸೋಂಕಿನಿಂದ ಈವರೆಗೆ ಸಾವನ್ನಪ್ಪಿದ ಸಂಖ್ಯೆ ೩,೧೧,೩೮೮ ಕ್ಕೆ ಏರಿಕೆಯಾಗಿದ್ದು ಸದ್ಯ ದೇಶದಲ್ಲಿ ೨೪,೯೫,೫೯೧ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ

೨೦ ಕೋಟಿಗೂ ಅಧಿಕ ಲಸಿಕೆ:

ದೇಶದಲ್ಲಿ ಕೋರೋನಾ ಸೋಂಕಿನ ಲಸಿಕೆ ಅಭಾವದ ನಡುವೆಯೂ ಇದುವರೆಗೂ ೨೦ ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ನಿನ್ನೆ ಒಂದೇ ದಿನ ೨೦.೧೭ ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದ್ದು ಇದುವರೆಗೆ ೨೦,೦೬,೬೨,೪೫೬ ಮಂದಿಗೆ ಲಸಿಕೆ ಹಾಕಲಾಗಿದೆ.ಇದರಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದವರು ಇದ್ದಾರೆ

೩೩.೪೮ ಕೋಟಿ ಪರೀಕ್ಷೆ

ದೇಶದಲ್ಲಿ ಕೊರೊನಾ ಸಂಖ್ಯೆ ಏರಿಕೆ ಮತ್ತು ಇಳಿಕೆಯಾಗುತ್ತಿರುವ ನಡುವೆ ಇಲ್ಲಿಯತನಕ ೩೩ ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ನಿನ್ನೆ ಒಂದೇ ದಿನ ೨೨,೧೭,೩೨೦ ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಇದುವರೆಗೆ ಒಟ್ಟಾರೆ ಪರೀಕ್ಷೆ ಪ್ರಮಾಣ ೩೩,೪೮,೧೧,೪೯೬ಕ್ಕೆ ಹೆಚ್ಚಳವಾಗಿದೆ ಎಂದು ಐಸಿಎಂಆರ್ ಹೇಳಿದೆ.