ಸಕ್ರಿಯ ಕ್ಷಯರೋಗ ಆಂದೋಲನ ಕಾರ್ಯಕ್ರಮ ಪರಿಶೀಲನೆ

ಚಿಂಚೋಳಿ , ಜು.25: ಜಿ ಪಂ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಮತ್ತು ಜಿಲ್ಲಾ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ. ಹಾಗೂ ತಾಲ್ಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ .ಇವುಗಳ ಸಂಯೋಗದಲ್ಲಿ, ಚಿಂಚೋಳ್ಳಿ ತಾಲ್ಲೂಕಿನ ಚಂದಾಪುರ ಪಟ್ಟಣದ ಗಣೇಶ ನಗರದಲ್ಲಿ ಸಕ್ರಿಯ ಕ್ಷಯರೋಗ ಆಂದೋಲನ ಕಾರ್ಯಕ್ರಮ ಜುಲೈ 17 ರಿಂದ ಅಗಸ್ಟ್ 2 ರವರೆಗೆ ನಡೆಯಲಿರುವ. ಮನೆ- ಮನೆ ಭೇಟಿ ಸಮೀಕ್ಷೆ ಮಾಡಿ ಕ್ಷಯರೋಗ ಲಕ್ಷಣಗಳ ಮಾಹಿತಿ ನೀಡಿ ಸಂಶಯಾಸ್ಪದ ಜನರ ಕಫಾದ ಮಾದರಿ ಸಂಗ್ರಹಿಸಲಾಗುತ್ತದೆ ಇದರ ಜಿಲ್ಲಾ ಮೇಲ್ವಿಚಾರಣೆ ಮಾಡಲು ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಮನೆ – ಮನೆ ಭೇಟಿ ನೀಡಿದ ಮನೆಗೆ ಮರು ಪರಿಶೀಲನೆ ಮಾಡಿದರು. ಚಂದಪುರ ಪಟ್ಟಣ ಹಾಗೂ ಚಿಂಚೋಳ್ಳಿ ಬಡಾವಣೆ ಯಲ್ಲಿ 5 ತಂಡಗಳು ರಚಿಸಲಾಗಿದೆ ಅದರಂತೆ. ದನಗರ ಗಲ್ಲಿ, ಸುಂದರ ನಗರ, ಗಣೇಶ ನಗರ, ಮೌಲಾ ಗಲ್ಲಿ, ಎಸ್ ಸಿ ಗಲ್ಲಿ. ಗಳಲ್ಲಿ ಸರ್ವೇ ಕಾರ್ಯಚರಣೆ ನಡೆಸಲಾಗುತ್ತಿದೆ. ಚಿಂಚೋಳ್ಳಿ ತಾಲ್ಲೂಕು ಹಿರಿಯ ಕ್ಷಯರೋಗ ಮೇಲ್ವಿಚಾರಕ ದಿನೇಶ ವಾಡೆಕರ್ , ತಾಲ್ಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಮೊರೆ, ಟಿಬಿ ಹೆಚ್ ವಿ , ಪ್ರವೀಣ್ ಕಾಂಬಳೆ. ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಯ ತಮ್ಮನೂರ , ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸರಿತಾ ಮಳಗೆ , ರೂಪ ಸಂಪತ್ ಕುಮಾರ್ , ಹಾಗೂ ದಿನಕ್ಕೆ 50 ಮನೆಗಳಂತೆ ತಂಡ 1 ಮತ್ತು 5 ತಂಡಗಳು ಆಂದೋಲನ ಸಮೀಕ್ಷೆ ನಡೆಯುತ್ತಿದೆ. ಅಂಗನವಾಡಿ ಸಹಾಯಕಿ ಲಕ್ಷ್ಮೀ , ಮನೆ ಭೇಟಿ ಸರ್ವೇಯಲ್ಲಿ ಭಾಗವಹಿಸಿದ್ದರು.