ಸಕ್ಕಿಂಗ್ ಜೆಟ್ಟಿಂಗ್ ವಾಹನ ಸಾರ್ವಜನಿಕರ ಸೇವೆಗೆ

ಕೆ.ಆರ್.ಪೇಟೆ:ಏ:27: ಪಟ್ಟಣದ ಪುರಸಭಾ ವ್ಯಾಪ್ತಿಯ ನಾಗರೀಕರಿಗೆ ಅನುಕೂಲವಾಗಲೆಂದು 13 ಮತ್ತು 14 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಖರೀದಿಸಿದ್ದ ಸಕ್ಕಿಂಗ್ ಜೆಟ್ಟಿಂಗ್ ವಾಹನಗಳನ್ನು ಪುರಸಭಾ ಅಧ್ಯಕ್ಷೆ ಮಹಾದೇವಿನಂಜುಂಡ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಪಟ್ಟಣದ ಪುರಸಭಾ ಕಛೇರಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅಧ್ಯಕ್ಷೆ ಮಹಾದೇವಿ ಪಟ್ಟಣದ ನಿವಾಸಿಗಳ ಬಹುದಿನಗಳ ಬೇಡಿಕಯಾಗಿದ್ದ ಈ ಯಂತ್ರಗಳನ್ನು ಖರೀದಿಸುವಲ್ಲಿ ಸಚಿವ ನಾರಾಯಣಗೌಡರ ಶ್ರಮ ಇದೆ. ನಾವು ವಿವಿಧ ಬಡಾವಣೆಗಳಲ್ಲಿ ಶೌಚಾಲಯಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ಅಂಥಹ ಸ್ಥಳಗಳಿಗೆ ಬೇರೆ ತಾಲ್ಲೂಕಿನಿಂದ ಸಕ್ಕಿಂಗ್ ಜೆಟ್ಟಿಂಗ್ ವಾಹನಗಳನ್ನು ಕರೆಯಿಸಿ ಸರಿಪಡಿಸುವ ಕೆಲಸ ಮಾಡುತ್ತಿದ್ದೆವು. ಇದು ಬಹಳ ಸಮಸ್ಯೆಯಾಗುತ್ತಿತ್ತು. ಆದರೆ ಸಚಿವರ ವಿಶೇಷ ಆಸಕ್ತಿಯಿಂದಾಗಿ 36 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಮ್ಮ ಪುರಸಭೆಯ ವತಿಯಿಂದ ಈ ವಾಹನಗಳನ್ನು ಖರೀದಿಸಿದ್ದು ಹಳೆಯ ಕಾಲದ ಶೌಚಾಲಯಗಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ.
ಕಳೆದ ಎರಡು ವರ್ಷಗಳಿಂದ ಪುರಸಭೆಗೆ ಆಡಳಿತ ಮಂಡಳಿ ಇರದ ಕಾರಣ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು.
ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದವು. ಆದರೆ ಈಗ ಪುರಸಭಾ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದಿದ್ದು ಶೀಘ್ರವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಡೆಯಲು ಆಡಳಿತಕ್ಕೆ ವೇಗ ನೀಡಲಾಗುವುದು. ಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಶೌಚಾಲಯದ ಯಾವುದೇ ಸ,ಸ್ಯೆಗಳಿದ್ದರೂ ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗುವುದು.
ಮುಂದಿನ ದಿನಗಳಲ್ಲಿ ಯುಜಿಡಿ ಕಾಮಗಾರಿಯು ಮುಗಿದಿದ್ದು ಇದಕ್ಕೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುವುದು. ಹಾಗೆಯೇ ಪಟ್ಟಣದ ಅಭಿವೃದ್ದಿ ವಿಷಯದಲ್ಲಿ ವಿಶೇಷ ಗಮನಹರಿಸಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಸಚಿವರ ಆಪ್ತ ಸಹಾಯಕ ದಯಾನಂದ್, ಪುರಸಭಾ ಸದಸ್ಯರುಗಳಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಪ್ರಮೋದ್‍ಕುಮಾರ್, ಶಾಮಿಯಾನ ತಿಮ್ಮೇಗೌಡ, ಸಂತೋಷ್‍ಕುಮಾರ್, ಡಿ.ಪ್ರೇಮ್‍ಕುಮಾರ್, ರವೀಂದ್ರಬಾಬು, ಹೆಚ್.ಎನ್.ಪ್ರವೀಣ್, ದೇವರಾಜು, ಹೆಚ್.ಡಿ.ಅಶೋಕ್, ಬಿಜೆಪಿ ಮುಖಂಡರಾದ ವಿಶ್ವನಾಥ್, ಗಿರೀಶ್, ನಂಜುಂಡ,ಮಂಜುನಾಥ್, ಸ್ನೇಹಿತ ರಮೇಶ್, ಪುರಸಭಾ ಅಧಿಕಾರಿಳಾದ ಅರ್ಚನಾ, ಮಧುಸೂಧನ್, ಸೋಮಶೇಖರ್, ರವಿಕುಮಾರ್, ಅಶೋಕ್, ಮಂಟೆ ಮಂಜು, ಸೇರಿದಂತೆ ಹಲವರು ಹಾಜರಿದ್ದರು.