ಸಕ್ಕರೆ ವಿತರಣೆ

ಚನ್ನಮ್ಮನ ಕಿತ್ತೂರ,ಆ19: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೆ ಪ್ರೋತ್ಸಾಹದಾಯಕವಾಗಿ ಪ್ರತಿ ಮೆ. ಟನ್ ಕಬ್ಬಿಗೆ ಅರ್ಧ ಕೆ.ಜಿ. ಸಕ್ಕರೆಯನ್ನು ಪ್ರತಿ ಕೆ.ಜಿ ಸಕ್ಕರೆಗೆ ರೂ.15/- ರಂತೆ ನೀಡಲು ಆಡಳಿತ ಮಡಳಿಯವರು ನಿರ್ಣಯಿಸಿದ ಪ್ರಕಾರ 17 ಅಗಷ್ಟ್ 2023 ರಿಂದ 17 ಸೆಪ್ಟಂಬರ್ 2023 ರವರೆಗೆ ಕಾರ್ಖಾನೆ ಆವರಣದಲ್ಲಿ ಸಕ್ಕರೆ ವಿತರಿಸಲಾಗುವುದು.
ಸಕ್ಕರೆ ಪಡೆಯಲು ಆಗಮಿಸುವಾಗ ಕಾರ್ಖಾನೆಯಿಂದ ನೀಡಿದ ಸಕ್ಕರೆ ಪಡೆಯುವ ಅನುಮತಿ ಪತ್ರ ಹಾಗೂ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಜೊತೆಗೆ ಮೊಬೈಲ್ ನಂ. ನಮೂದಿಸಿರಬೇಕು. ಕಬ್ಬು ಪೂರೈಸಿದ ರೈತರು ಖುದ್ದಾಗಿ ಬರಲಾಗದೇ ಇದ್ದಾಗ ಅಂತಹ ಸಂದರ್ಭದಲ್ಲಿ ಸಕ್ಕರೆ ಪಡೆಯುವ ಅನುಮತಿ ಪತ್ರದಲ್ಲಿರುವ ಅಧಿಕಾರ ಪತ್ರದಲ್ಲಿ ಸಹಿ ಮಾಡಿಸಿಕೊಂಡು ಸಕ್ಕರೆ ತರಲು ಬರುವವರು ತಮ್ಮ ಆಧಾರ್ ಕಾರ್ಡ ಝರಾಕ್ಸ್ ಪ್ರತಿ ಮತ್ತು ಜೊತೆಗೆ ಮೊಬೈಲ್ ನಂ. ಕಡ್ಡಾಯವಾಗಿರಬೇಕು, ಕಾರ್ಖಾನೆ ರಜೆದಿನ ಹೊರತುಪಡಿಸಿ ಸಕ್ಕರೆ ವಿತರಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ವೀರೇಶ ಹೂಲಿಕಟ್ಟಿ ಪ್ರಕಟಣೆಗೆ ತಿಳಿಸಿದ್ದಾರೆ.