ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುವಂತೆ ಮನವಿ

ಕಾಳಗಿ. ಏ.2 : ಚಿಂಚೋಳಿ ತಾಲೂಕು ಬೈ ಎಲೆಕ್ಷನ್ ವೇಳೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಭಾರತೀಯ ಜನತಾ ಪಕ್ಷ ಚಿಂಚೊಳಿಯಲ್ಲಿ ಗೆಲ್ಲಿಸಿ ಕೊಟ್ಟರೇ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡುತ್ತೇವೆ. ಎಂದು ಮಾತು ಕೊಟ್ಟಿದ್ದೀರಿ ಅದೇ ರೀತಿ ನಮ್ಮ ಕ್ಷೇತ್ರದ ಆರಾಧ್ಯ ದೈವ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಾಲಯದಲ್ಲಿ ದರ್ಶನ ಪಡೆದು ಅಲ್ಲಿನ ಗ್ರಾಮಸ್ಥರಿಗೂ ಭರವಸೆ ನಿಡಿದ್ದೀರಿ. ರಟಕಲ್ ವಿರಕ್ತಮಠದ ಮಠದಲ್ಲಿಯೂ ಸಹ ಮುರುಘೇಂದ್ರ ಶಿವಯೋಗಿ ಹಾಗೂ ನೀಲಕಂಠ ಮಹಾಸ್ವಾಮಿಗಳ ದರ್ಶನ ಪಡೆದು ಗ್ರಾಮಸ್ಥರ ಎದುರು ಸಕ್ಕರೆ ಕಾರ್ಖಾನೆ ಪುನಹ ನಿರ್ಮಾಣ ಮಾಡುತ್ತೇವೆಂದು ಮಾತು ನೀಡಿದ್ದೀರಿ.

ಅದೇ ರೀತಿ ಚಿಂಚೋಳಿ ಉಪ ಚುನಾವಣೆ ಕಾರ್ಯಕ್ರಮದಲ್ಲಿಯೂ ಸಹ ಹೇಳಿದ್ದೀರಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಸಹ ಯಾವುದೇ ಪ್ರತಿಫಲ ದೊರಕ್ಕಿಲ್ಲ ದಯಮಾಡಿ ರೈತರ ಅನುಕೂಲಕ್ಕಾಗಿ ಪ್ರಾರಂಭ ಮಾಡಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಚಿಂಚೋಳಿ ಶಾಸಕರಿಗೆ ಸಂಸದರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷರಾದ ಶಂಕರ ಚೋಕಾ ಹೇಳಿದರು.