ಸಕ್ಕರೆ ಕಾಯಿಲೆಯಿದ್ದರೂ ಸಹ ಭಯ ಬೇಡ

 ಚಿತ್ರದುರ್ಗ. ನ.೧೪;  ಜಂಕ್ ಫುಡ್‌ಗಳ ಬಳಕೆ ನಿಲ್ಲಿಸಿ, ಸಿರಿಧಾನ್ಯಗಳನ್ನು ಹೆಚ್ಚು ಬಳಕೆ ಮಾಡಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಹುದು. ದಿನನಿತ್ಯ ಒಂದಿಷ್ಟು ವ್ಯಾಯಾಮ ಮಾಡಬೇಕು, ಸಕ್ಕರೆ ಕಾಯಿಲೆಯಿದ್ದರೂ ಸಹ ಭಯಭೀತರಾಗುವುದು ಬೇಡ, ಅವುಗಳ ನಿವಾರಣೆಗೆ ಸರಳ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಸೂಕ್ಷö್ಮಜೀವಶಾಸ್ತç ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರುಣಾ. ಜಿ.ಎಲ್ ತಿಳಿಸಿದರು.ಅವರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಪ ವೃಕ್ಷ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ “ವಿಶ್ವ ಮಧುಮೇಹ ದಿನ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೊದಲೆಲ್ಲ ಪ್ರಾಣಿಗಳನ್ನ ಉಪಯೋಗಿಸಿ ಇನ್ಸುಲಿನ್ ಉತ್ಪಾದಿಸುತ್ತಿದ್ದರು, ಈಗ ಈ ಕೊಲೈನಿಂದ ಉತ್ಪಾದನೆ ಮಾಡುತ್ತಿದ್ದು, ಮನುಷ್ಯನಲ್ಲಿರುವ ಇನ್ಸುಲಿನ್ ಜೀನ್ಸನ ತೆಗೆದು ಸೂಕ್ಷö್ಮಜೀವಗಳಿಗೆ ಸೇರ್ಪಡಿಸಿ, ನಂತರ ಪ್ರೋಟಿನ್‌ನಿಂದ ಇನ್ಸುಲಿನ್ ಬೇರ್ಪಡಿಸಿ ಸಂಗ್ರಹಿಸಬಹುದು. ಈಗ ಪ್ರತಿಯೊಂದು ಔಷಧ ವ್ಯಾಪಾರಿಗಳ ಅಂಗಡಿಯಲ್ಲಿ ದೊರೆಯುವಂತಾಗಿದೆ. ಮೊದಲೆಲ್ಲ ಇನ್ಸುಲಿನ್‌ಗೋಸ್ಕರ ಮತ್ತು ಕಣ್ಣಿನ ಕಾರ್ನಿಯಗಳಿಗೆ ಸರದಿಯಲ್ಲಿ ಕಾಯಬೇಕಾಗಿತ್ತು. ಆದರೆ ವಿಜ್ಞಾನದ ಮುಖಾಂತರ ಅವುಗಳನ್ನು ಹೆಚ್ಚು ಉತ್ಪಾದನೆ ಮಾಡಲು ಅವಕಾಶವಿದೆ ಎಂದರು. ಸಹಾಯಕ ಪ್ರಾಧ್ಯಾಪಕರಾದ ಡಾ. ನಟರಾಜ್.ಬಿ.ಟಿ. ಮಾತನಾಡುತ್ತಾ ದೈಹಿಕ ವ್ಯಾಯಾಮವಿಲ್ಲದೆ ಜನರು ಹೆಚ್ಚು ದೇಹವನ್ನು ಬೆಳೆಸಿಕೊಂಡು ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ, ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಅದನ್ನು ತಡೆಗಟ್ಟಲು ಮತ್ತು ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅತಿ ಮುಖ್ಯ. ಈಗ ಎಲ್ಲಾ ಕಡೆ ಕಲಬೆರಕೆ ಆಹಾರ, ಅನಾರೋಗ್ಯಕರ ಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು ಒಳ್ಳೆಯದು ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡುತ್ತಾ ಯೋಗಾಭ್ಯಾಸ, ಪ್ರಾಣಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಪಯುಕ್ತವಾಗಿದೆ., ಸಿಹಿಯಾದ ಮಾವು, ಹಲಸು ಇಂತಹ ಕ್ಯಾಲೋರಿ ಇರುವ ಹಣ್ಣುಗಳನ್ನು ಒಂದು ಹೊತ್ತಿನ ಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳ್ಳೆಯದು ಎಂದರು.ಕಾರ್ಯಕ್ರಮದಲ್ಲಿ ಜೈನಿಕ ತಂತ್ರಜ್ಞಾನ ಮತ್ತು ಸೂಕ್ಷö್ಮಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಆಫ್ರಿನ್, ತನುಷಾ, ಪಲ್ಲವಿ, ಹೇಮಾ, ರೊಟರ‍್ಯಾಕ್ಟ್ ಹೆಚ್.ಎಸ್,ರಚನ ಉಪಸ್ಥಿತರಿದ್ದರು.