ಸಕಾಲದಲ್ಲಿ ವಿದ್ಯಾರ್ಥಿ ವೇತನ ಪೆÇ್ರೀತ್ಸಾಹ ಧನ ಮಂಜೂರು: ಡಾ. ಪುರುಷೋತ್ತಮ

ಹುಬ್ಬಳ್ಳಿ, ನ 10: ಭಾರತ ಸರ್ಕಾರ ಶಿಷ್ಯವೇತನ, ಅಂತರಜಾತಿ ಪೆÇ್ರೀತ್ಸಾಹಧನ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಪೆÇ್ರೀತ್ಸಾಹಧನ ಸೇರಿದಂತೆ ಇಲಾಖೆಯ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ. ಪುರುಷೋತ್ತಮ.ಎನ್.ಆರ್. ಹೇಳಿದರು.

“ವಿದ್ಯಾರ್ಥಿವೇತನ ಅಭಿಯಾನ ” ಎಂಬ ಶೀರ್ಷಿಕೆಯಡಿ ಹುಬ್ಬಳ್ಳಿ ಮಿನಿ ವಿಧಾನಸೌಧ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ” ವಿಶೇಷ ಅಭಿಯಾನ ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲಾಖೆಯ ಪ್ರಮುಖ ಯೋಜನೆಗಳ ಸೌಲಭ್ಯವನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಪೂರೈಸುವ ನಿಟ್ಟಿನಲ್ಲಿ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಆಶಯದಂತೆ 27-10-2021 ರಿಂದ 17-11-2021 ರ ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗದವರು ಇಲಾಖೆಗೆ ಸಲ್ಲಿಸಿದ ಎಲ್ಲಾ ಪ್ರಸ್ತಾವನೆ ಮೇರೆಗೆ ಮಿಂಚಿನ ಕಾರ್ಯದ ಮೂಲಕ ಅರ್ಹ ಫಲಾನುಭವಿಗಳಿಗೆ ಪೆÇ್ರೀತ್ಸಾಹ ಧನ ಮಂಜೂರು ಮಾಡಲಾಗಿರುತ್ತದೆ. ಭಾರತ ಸರ್ಕಾರದ ಶಿಷ್ಯವೇತನಕ್ಕೆ ಸಂಬಂಧಿಸಿದಂತೆ, ತಾಲೂಕು ಮಟ್ಟದ ಲಾಗಿನ್‍ನಲ್ಲಿ ಸ್ವಿಕೃತಗೊಂಡ ಎಲ್ಲಾ ಅರ್ಜಿಗಳಿಗೂ ಈಗಾಗಲೇ ಅನುಮೋದನೆ ನೀಡಿ, ಮಂಜೂರಾತಿ ನೀಡಲಾಗಿರುತ್ತದೆ. ಡಿಬಿಟಿ ಮೂಲಕ ವಿದ್ಯಾರ್ಥಿಗಳ ಡೇ-ಸ್ಕಾಲರ್ ಮೊತ್ತ ಹಾಗೂ ವಿದ್ಯಾರ್ಥಿಗಳ ಫೀ ಮೊತ್ತವನ್ನು ಜಮಾ ನೀಡಲು ಕ್ರಮಕೈಗೊಳ್ಳಲಾಗಿರುತ್ತದೆ. ವಿದ್ಯಾರ್ಥಿಗಳಿಗೆ ” ಪ್ರೀ ಶೀಪ್ ಕಾರ್ಡ”ಗಳಿಗೆ ಅರ್ಜಿ ಸಲ್ಲಿಸುವಂತೆ ಪ್ರಾಚಾರ್ಯರು ಮಾರ್ಗದರ್ಶನ ನೀಡಬೇಕು. ಜಿಲ್ಲಾ ಮಟ್ಟದಿಂದ ಪದವಿ ಪೂರ್ವ, ಪದವಿ, ತಾಂತ್ರಿಕ ಕೊರ್ಸ್, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರು ಆನ್ ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳ ಅನುಸಾರ ಅನುಮೋದನೆ ನೀಡಿ, ಮಂಜೂರಾತಿ ನೀಡಲಾಗಿರುತ್ತದೆ. ಅಂತರಜಾತಿ ವಿವಾಹಿತ ದಂಪತಿಗಳು ಕೂಡಾ ಆನ್ ಲೈನ್ ಮೂಲಕ ಸಲ್ಲಿಸಿರುವ ಪ್ರಸ್ತಾವನೆಯ ಅನುಗುಣವಾಗಿ ಅರ್ಹ ದಂಪತಿಗಳಿಗೆ ಪೆÇ್ರೀತ್ಸಾಹಧನ ಮಂಜೂರಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ರವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಮಿಂಚಿನ ಕಾರ್ಯದ ಮೂಲಕ ಎಲ್ಲರಿಗೂ ದೊರಕುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲ ಕಾಲೇಜು ಪ್ರಾಚಾರ್ಯರ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಪ್ರಮುಖವಾಗಿದೆ ಎಂದ ತಿಳಿಸಿದರು.

ಸಭೆಯಲ್ಲಿ ತಾಲೂಕಿನ ಎಲ್ಲಾ ಕಾಲೇಜು ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು, ಮುಖಂಡ ಎಲ್.ಸಿ ಬಕ್ಕಾಯಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.