ಸಕಾಲದಲ್ಲಿ ಬೆಳೆ ಸಾಲವನ್ನು ಮರುಪಾವತಿ ಮಾಡಿ ಲಾಭವನ್ನು ಪಡೆಯಿರಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.26: ಸಕಾಲದಲ್ಲಿ ಬೆಳೆ ಸಾಲವನ್ನು ಮರುಪಾವತಿ ಮಾಡಿ ಹೆಚ್ಚಿನ ಲಾಭವನ್ನು ಪಡೆಯುವಂತೆ ರೈತರಿಗೆ ಜಿಲ್ಲಾ ವಲಯದ ಮುಖ್ಯ ವ್ಯವಸ್ಥಾಪಕ ಭವೇಶ್ ಕುಮಾರ್ ಸಿಂಗ್ ತಿಳಿಸಿದರು.
ತಾಲ್ಲೂಕಿನ ಕೆ.ಸೂಗೂರು ಗ್ರಾಮದ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ  ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗಾಗಿ ರಾತ್ರಿ ಶಿಬಿರದಲ್ಲಿ ಮಾತನಾಡಿದರು.
ಸರಿಯಾದ ಸಮಯದಲ್ಲಿ ಸಾಲವನ್ನು ನವೀಕರಿಸಿ ಎಕರೆವಾರು ಹೆಚ್ಚಿನ ಬೆಳೆಸಾಲ ಪಡೆಯಬಹುದು, 5ವರ್ಷಗಳ ಹೊಸ ಕಿಸಾನ್ ಕ್ರೆಡಿಟ್‌ ಕಾರ್ಡ್‌ ಲಭ್ಯ, ಮಕ್ಕಳ ವಿದ್ಯಾಭ್ಯಾಸ, ಟ್ರ್ಯಾಕ್ಟರ್, ನೀರಾವರಿ, ತೋಟಗಾರಿಕೆ ಸಾಲದ ಅವಕಾಶ ಇದೆ.ಉಚಿತವಾಗಿ ರೂಪೆ ಕಿಸಾನ್ ಕಾರ್ಡ್ ಪಡೆದು ಅವಶ್ಯಕತೆಗನು ಗುಣವಾಗಿ ಹಣ ಪಡೆಯುವುದರಿಂದ ಬಡ್ಡಿಯಲ್ಲಿ ಉಳಿತಾಯ ಮಾಡಿ.
ಆತ್ಮ ನಿರ್ಭರ ಭಾರತ್ ಅಭಿಯಾನದಡಿಯಲ್ಲಿ ರೈತರ ಏಳಿಗೆಗಾಗಿ ಬೆಳೆ, ಬಂಗಾರದ ಅಡವಿನ ಕೃಷಿ, ಟ್ರಾಕ್ಟರ್, ಸ್ವ ಸಹಾಯ ಸಂಘಗಳು, ತೋಟಗಾರಿಕೆ, ಪಶು ಸಂಗೋಪನೆ, ಗ್ರಾಮೀಣ ಉಗ್ರಾಣ, ನೀರಾವರಿ, ಅಡಮಾನ ಸಾಲ ಪಡೆದು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಗೌರವದಿಂದ, ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರಬಹುದೆಂದು ತಿಳಿಸಿದರು.
ಪ್ರಗತಿಪರ ರೈತರಿಗೆ ಹಾಗೂ ಬ್ಯಾಂಕ್ ನಿಂದ ಸಕಾಲದಲ್ಲಿ ಬೆಳೆಸಾಲವನ್ನು ನವೀಕರಿಸಿ ಲಾಭ ಪಡೆದ ರೈತರಿಗೆ ಸನ್ಮಾನಿಸಿ ಗೌರವಿಸಿದರು.
 ಸಿರುಗುಪ್ಪ ಶಾಖಾ ವ್ಯವಸ್ಥಾಪಕ ಎಲ್.ಎಸ್.ಪಾಟೀಲ್,
 ವಲಯ ಕಛೇರಿ ಉಪವ್ಯವಸ್ಥಾಪಕ ಮೋಹನ್ ಕೃಷ್ಣ, ವಲಯ ಕಛೇರಿ ಸಹಾಯಕ ಅಧಿಕಾರಿ ಧರ್ಮೇಂದ್ರ, ಸಿರುಗುಪ್ಪ ವ್ಯವಸ್ಥಾಪಕ ಶ್ರೀನಿವಾಸ ಚಿಟಿಕಿನ,  ಕುಡುತಿನಿ ಶಾಖಾ ವ್ಯವಸ್ಥಾಪಕ ಈರೇಶ, ಉಪವ್ಯವಸ್ಥಾಪಕ ಬೋಯ ಸುರೇಶ್, ಗ್ರಾ.ಪಂ. ಸದಸ್ಯರಾದ ಎಚ್.ಎಂ.ರಾಮಚಂದ್ರಪ್ಪ, ಎಚ್.ಗಿರೇಪ್ಪ, ವೀರಭದ್ರಗೌಡ, ಸಿದ್ದಪ್ಪ, ಹಾಸ್ಯ ಕಲಾವಿದ ಎಚ್.ಜೆ.ನರಸಿಂಹ ಮೂರ್ತಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.