ಸಕಾಲಕ್ಕೆ ಸಾಲ ಪಾವತಿಸುವುದು ಉತ್ತಮ: ಡಾ. ಗಣಜಲಖೇಡ್

ಕಲಬುರಗಿ,ನ.15:ಸಕಾಲಕ್ಕೆ ತೆಗೆದುಕೊಂಡ ಸಾಲವನ್ನು ಮರುಪಾವತಿಸುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರು ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾದ ಪ್ರಾಂಗಣದಲ್ಲಿ 2020-2021ನೇ ಸಾಲಿನ ಆರೋಗ್ಯ ಸಹಾಯಕರು, ಹಿರಿಯ, ಕಿರಿಯ ನೌಕರರ ಪತ್ತಿನ ಸಹಕಾರ ಸಂಘದ ಹತ್ತನೇ ವಾರ್ಷಿಕ ಸರ್ವ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ದಿನಾಚರಣೆ ಅಂಗವಾಗಿ ಎಲ್ಲ ಮಕ್ಕಳಿಗೂ ಅಭಿನಂದಿಸಿದರು.
ಆರೋಗ್ಯ ಇಲಾಖೆಯಲ್ಲಿ ಕೆಲಸದ ಒತ್ತಡದಲ್ಲಿ ಇದ್ದರೂ ಕೂಡ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಹೆಚ್ಚಿನ ಅಂಕ ಪಡೆದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ. ಇದರಿಂದ ಇನ್ನುಳಿದ ಮಕ್ಕಳು ಮುಂದಿನ ದಿನಗಳಲ್ಲಿ ಹೆಚ್ಚು, ಹೆಚ್ಚು ಅಂಕ ಪಡೆದು ಹೆಸರು ಮಾಡಲಿ ಎಂದು ಅವರು ಹರಸಿದರು.
ಸಂಘದ ಅಧ್ಯಕ್ಷ ಎನ್.ಡಿ. ಕಾಚಾಪೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದಶಮಾನೋತ್ಸವದ ಸಂಭ್ರಮದ ವರದಿಯನ್ನು ಹೇಳಿದರು. ಸಂಘವು 2012ರಿಂದ ಇಲ್ಲಿಯವರೆಗೆ 2021ನೇ ಸಾಲಿಗೆ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎಲ್ಲರ ಸಹಕಾರದಿಂದ ಒಳ್ಳೆಯ ರೀತಿಯಿಂದ ಸಂಘ ನಡೆಸಿಕೊಂಡು ಬರುತ್ತಿದ್ದೇವೆ. 20,000ರೂ.ಗಳಿಂದ ಹಿಡಿದು ಇಂದು 70000ಕ್ಕೆ ಬಂದಿದ್ದೇವೆ. ಇನ್ನು ಒಂದು ಕೋಟಿ ರೂ.ಗಳಿಗೆ ಸಮೀಪದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘದ ಸದಸ್ಯರಿಗೆ ನಿವೇಶನ ಕೊಡುವ ಗುರಿ ಇದೆ ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ರಾಷ್ಟ್ರೀಯ ಫಾರ್ಮಾಸಿಸ್ಟ್ ಸಂಘದ ಮಾಜಿ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಅವರು ಮಾತನಾಡಿ, ನಮ್ಮ ಭಾಗದವರು ಅಂದರೆ ಅಸ್ಪøಶ್ಯತೆಯಿಂದ ನೋಡುತ್ತ ಬೇರೆ ಹೊರಗಿನ ಜಿಲ್ಲೆಯವರು ನಮ್ಮ ಜಿಲ್ಲೆಯಿಂದ ರಾಜ್ಯಾಧ್ಯಕ್ಷ ಸ್ಥಾನದಿಂದ ನಮ್ಮ ಸಂಘಟನೆಯಿಂದ 20 ವರ್ಷಗಳಿಂದ ಸಹಕಾರ ಕೊಟ್ಟಿದ್ದರಿಂದ ನನಗೆ ಗುರುತಿಸಿ ಕೆಲಸ ನಿರ್ವಹಿಸಲು ಕಾರಣರಾದ ಎಲ್ಲರ ವಿಶ್ವಾಸವನ್ನು ಉಳಿಸಿಕೊಳ್ಳುವೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ಧಾರೂಢ ಅವರು ಲೆಕ್ಕಪತ್ರ ಜಮಾ ಮತ್ತು ಖರ್ಚು, ಲಾಭ, ಹಾನಿ, ಅಡವೆ ಪತ್ರದ ಕುರಿತು ವರದಿ ವಾಚಿಸಿದರು. ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಬಹುಮಾನ ಪಡೆದ ಸೃಷ್ಟಿ ತಂದೆ ಸಾವಿತ್ರಿ ಅವರಿಗೆ 2000ರೂ.ಗಳು, ದ್ವಿತೀಯ ಬಹುಮಾನವಾಗಿ ಭವಾನಿ ತಾಯಿ ಸರಸ್ವತಿ ಅವರಿಗೆ 15000ರೂ.ಗಳು, ತೃತೀಯ ಬಹುಮಾನವಾಗಿ ಅಖಿಲೇಶ್ ಸಂತೋಷ್ ಅವರಿಗೆ 1000ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರಥಮ ಬಹುಮಾನವಾಗಿ ಸುಹಾಸ್ ಶ್ರೀಶೈಲ್ ಅವರಿಗೆ 2000ರೂ.ಗಳು, ದ್ವಿತೀಯ ಬಹುಮಾನವಾಗಿ ಸ್ವಾತಿ ಅಶೋಕ್ ಅವರಿಗೆ 15000ರೂ.ಗಳು ಹಾಗೂ ತೃತೀಯ ಬಹುಮಾನವಾಗಿ ಶಶಾಂಕ್ ಮಲ್ಲಿಕಾರ್ಜುನ್ ಅವರಿಗೆ 1000ರೂ.ಗಳ ನಗದು ಹಾಗೂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಾಕಲದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಹಾಗೂ ವಯೋನಿವೃತ್ತಿ ಹೊಂದಿದ ಬಸವರಾಜ್ ಬೇಡಪಳ್ಳೆಳ್ಳಿ, ಇಂದುಮತಿ ಕಡಗಂಚಿ, ಸ್ವಪ್ನ ಐಸಿಡಿಎಸ್, ರಾಜು ದಾಬಿಮನಿ, ಪದ್ಮಿನಿ ಕಿರಣಗಿ, ಅಮೃತ್ ಹಿರೇಮನಿ ಅವರಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಪ್ರಮುಖರಾದ ಗುಂಡಪ್ಪ ದೊಡ್ಡಮನಿ, ಮಜಿದ್ ಪಟೇಲ್, ಗಂಗಮ್ಮ ಹಿರೇಮಠ್, ಅಂಬುಜಾ ಅವರು ಉಪಸ್ಥಿತರಿದ್ದರು. ನಾರಾಯಣ್ ರಾಜಶೇಖರ್ ಕುರಕೋಟಿ, ಸಂತೋಷ್ ಕುಂಡಳ್ಳಿ, ಶ್ರೀಶೈಲ್ ಅರಳಗುಂಡಗಿ, ಸಿದ್ಧಾರೂಢ, ಮೊಹ್ಮದ್ ಖಾನ್, ಸವಿತಾ ದೀಕ್ಷಿತ್, ಶ್ರೀಮತಿ ಪಾಟೀಲ್, ಗಣಪತಿ ಮಂಬಡಶೆಟ್ಟಿ, ಗಣೇಶ್ ಚಿನ್ನಕಾರ್, ಶರಣು ಬಿರಾದಾರ್, ನಾಗರಾಜ್ ಇಟಗಿ, ಶಕೀಲ್ ಪಾಶಾ, ನಾಗಶೆಟ್ಟಿ, ವಿಜಯಕುಮಾರ್ ಖಜೂರಿ, ಅಮರಯ್ಯ, ಸರಸ್ವತಿ ನೀಲಕಂಠರಾವ್ ಗೋಗಿ ಅವರು ಪಾಲ್ಗೊಂಡಿದ್ದರು. ಗಂಗಮ್ಮ ಅವರು ಪ್ರಾರ್ಥನಾಗೀತೆ ಹಾಡಿದರು. ಅಮರಯ್ಯ ಅವರು ಸ್ವಾಗತಿಸಿದರು. ಅಮೃತಪ್ಪ ಹಿರೇಮನಿ ಅವರು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಚಿನ್ನಾಕರ್ ಅವರು ವಂದಿಸಿದರು.