ಸಕಾಲಕ್ಕೆ ಬಿಸಿಯೂಟ ಸಾಮಾಗ್ರಿಗಳನ್ನು ಒದಗಿಸುವಂತೆ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ : ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಷರದಾಸೋಹ ಯೋಜನೆಯಡಿ ಆಹಾರ ಧಾನ್ಯಗಳು ಸಮರ್ಪಕವಾಗಿ ಸರಬರಾಜಾಗದೆ ಇರುವುದನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾ.ಸಂಘದ ಪದಾಧಿಕಾರಿಗಳು, ತಾ.ಪಂ. ಇ.ಒ. ಎಂ.ಬಸಪ್ಪರಿಗೆ ಮನವಿ ಸಲ್ಲಿಸಿದರು.
ಕ.ರಾ.ಸ.ನೌ.ತಾ.ಅಧ್ಯಕ್ಷ ಲಿಂಗರಾಜ್ ಮಾತನಾಡಿ ಅಕ್ಷರ ದಾಸೋಹಕ್ಕೆ ಶಾಲೆಗಳಿಗೆ ನೀಡಬೇಕಾದ ಅಕ್ಕಿ, ಬೇಳೆ, ಎಣ್ಣೆ, ಸಿಲಿಂಡರ್ ಪ್ರತಿತಿಂಗಳು ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ.  ಇದರಿಂದಾಗಿ ಬಿಸಿಯೂಟ ತಯಾರಿಸಲು ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೇ.16 2022 ರಂದು  ಶಾಲೆಗಳು ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಮೂರು ಬಾರಿ ಮಾತ್ರ ಆಹಾರ ಧಾನ್ಯಗಳು ಸರಬರಾಜಾಗಿವೆ. ಇನ್ನೂ 2 ತಿಂಗಳ ಆಹಾರ ಧಾನ್ಯಗಳು ಸರಬರಾಜಾಗಿಲ್ಲ, ಇದರಿಂದಾಗಿ ಹೊರಗಿನಿಂದ ಆಹಾರ ಧಾನ್ಯಗಳನ್ನು ಶಿಕ್ಷಕರು ಖರೀದಿಸಿ ತಂದು ಬಿಸಿಯೂಟ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಪ್ರತಿ ಶಾಲೆಗೆ ಒಂದೇ ಬಾರಿ ಅಕ್ಕಿ, ಬೇಳೆ, ಎಣ್ಣೆ, ಸಿಲಿಂಡರ್‍ನ್ನು ಪ್ರತಿತಿಂಗಳು ನೀಡಬೇಕಾಗಿದ್ದು, ಕೆಲವು ಶಾಲೆಗಳಿಗೆ ಅಕ್ಕಿ, ಬೇಳೆ ನೀಡಿದರೆ ಇನ್ನು ಕೆಲವು ಶಾಲೆಗಳಿಗೆ ಅಕ್ಕಿ ಮತು ಎಣ್ಣೆ ಮಾತ್ರ ನೀಡಲಾಗಿದೆ. ಇದರಿಂದಾಗಿ ಬಿಸಿಯೂಟ ತಯಾರಿ¸ಲು ತೊಂದರೆಯಾಗುತ್ತಿದೆ. ಆದ್ದರಿಂದ ಸಕಾಲಕ್ಕೆ ಆಹಾರ ಧಾನ್ಯ ಸಿಲಿಂಡರ್‍ನ್ನು ಪೂರೈಕೆ ಮಾಡಬೇಕ,
ಶಾಲೆಗಳಿಗೆ ಸರಬರಾಜು  ಮಾಡುವ ಆಹಾರ ಧಾನ್ಯಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಈ ಬಗ್ಗೆ ತಾ.ಪಂ ಇ..ಒ., ಬಿ.ಇ.ಒ. ಅಕ್ಷರದಾಸೋಹ ಅಧಿಕಾರಿಗಳ ಗಮನಕ್ಕೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ತಾ.ಪಂ. ಇ.ಒ. ಎಂ.ಬಸಪ್ಪ ಮಾತನಾಡಿ ಕಳಪೆ ಮಟ್ಟದ ಆಹಾರ ಧಾನ್ಯಗಳು ಸರಬರಾಜಾದರೆ ಅದನ್ನು ಹಿಂದಕ್ಕೆ ಕಳುಹಿಸಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಸರ್ಕಾರ ಪೂರೈಕೆ ಮಾಡುತ್ತಿದೆ.  ಇನ್ನು ಮುಂದೆ ಸಕಾಲಕ್ಕೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಅಕ್ಷರ ದಾಸೋಹ ತಾ.ನಿರ್ದೇಶಕ ಪದ್ಮನಾಭ, ಶಿಕ್ಷಕರಾದ ಹನುಮಂತಪ್ಪ, ಚಂದ್ರಮೌಳಿ, ಶ್ರೀಧರ, ಸೂರ್ಯಕಾಂತರೆಡ್ಡಿ, ಜಿ.ವೆಂಕಟೇಶ, ಹನುಮಂತಗೌಡ, ಸುರೇಶ ಇನ್ನಿತರರು ಇದ್ದರು.

Attachments area