ಸಕಾಲಕ್ಕೆ ಬಸ್ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.19: ತಾಲ್ಲೂಕಿನ ಬಲಕುಂದಿ ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಕಾಲಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯ ಬಲಕುಂದಿ ಗ್ರಾಮದಿಂದ ಉಪ್ಪಾರ ಹೊಸಳ್ಳಿ, ತೆಕ್ಕಲಕೋಟೆ, ಸಿರುಗುಪ್ಪ ಹಾಗೂ ಬಳ್ಳಾರಿಗೆ ಸಾರ್ವಜನಿಕರು ಹಾಗು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಬೆಳಿಗ್ಗೆ 9 ಗಂಟೆಗೆ ಬಂದ ಕೂರಿಗನೂರು- ಬೂದುಗುಪ್ಪ ಬಸ್  ಗಂಟೆ 10.30  ಆದರೂ  ವಾಹನ ಚಲಿಸಲಿಲ್ಲ, ಇದರಿಂದ ಬೇಸತ್ತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
 ಶಾಲಾ ಸಮಯಕ್ಕೆ ತೆರಳಲು ಇದೊಂದೇ ಬಸ್ ಇರುವುದರಿಂದ ಅನಿವಾರ್ಯವಾಗಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇಬಸ್ ನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ ಆದ್ದರಿಂದ ಈ ಸಮಯಕ್ಕೆ ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳಾದ ಬಸವರಾಜ, ಕಾಳಿಂಗ, ಅಮರೇಶ ಒತ್ತಾಯಿಸಿದರು.
ಬೆಳಿಗ್ಗೆ 9.00 ಕ್ಕೆ  ಉಪ್ಪಾರ ಹೊಸಳ್ಳಿಗೆ ಬರುವ ಸರ್ಕಾರಿ ಶಾಲಾವಾಹನವನ್ನು ಬಲಕುಂದಿವರೆಗೆ ವಿಸ್ತರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಗಾಮಸ್ಥರಾದ ಶಾಂತಕುಮಾರ್, ಕಬ್ಬೇರು ಕಾಳಪ್ಪ ಎಚ್ಚಸಿದರು.