ಸಕಾಲಕ್ಕೆ ದೊರೆಯದ ಅಂಬುಲೇನ್ಸ್- ಕತ್ತಲೆಯಲ್ಲಿ ಆಸ್ಪತ್ರೆ

ಟಾಟಾ ಎಸಿ-ಟಾಂಟಾಂ ಮುಖಾಮುಖಿ ಡಿಕ್ಕಿ- ೨೧ ಜನರಿಗೆ ಗಂಭೀರ ಗಾಯ
ಸಿರವಾರ.ಸೆ.೨೬-ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿ ಕೆಲಸಕ್ಕೆ ಹೊಗಿದ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟಾಟಾ ಎಸಿ ವಾಹನಕ್ಕೆ ಟಾಂಟಾಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು ೨೦ಕ್ಕೂ ಅದಿಕ ಕೂಲಿ ಕಾರ್ಮಿಕರಿಗೆ ತೀವ್ರಪ್ರಮಾಣದಲ್ಲಿ ಗಾಯಗಳಾದ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ರೀಮ್ಸ್‌ಗೆ ಕಳಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿಯೆ ಅಂಬುಲೇನ್ಸ್ ಇದ್ದರೂ ಸಹ ಸಕಾಲಕಕ್ಕೆ ಅದರ ಸೇವೆ ಲಭ್ಯವಾಗಲಿ, ಸಂಜೆ ವೇಳೆ ಅಪಘಾತ ಸಂಬಂವಿರುವದರಿಂದ ವಿದ್ಯುತ್ ಇಲ್ಲದೆ, ಬ್ಯಾಟರಿ, ಜನರೇಟರ್ ಇಲ್ಲದೆ ಆಸ್ಪತ್ರೆಯು ಕತ್ತಲೆಯಲ್ಲಿಯೆ ಚಿಕಿತ್ಸೆ ನೀಡಲಾಯಿತು.
ಸಿರವಾರ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಶನಿವಾರ ಸಂಜೆ ಈ ಅಪಘಾತ ಸಂಬವಿಸಿದೆ ವಿದ್ಯಾನಗರ ಕಾಲೋನಿಯ ಕೂಲಿಕಾರರು ಕೂಲಿ ಕೆಲಸ ಮುಗಿಸಿಕೊಂಡು ಪಟ್ಟಣಕ್ಕೆ ಆಗಮಿಸುತ್ತಿರುವಾಗ ಟಾಂ ಟಾಂ ಆಟೋವಯ ಎದುರುಗಡೆ ಬಂದ ಟಾಟಾ ಎಸಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಟಾ ಟಾ ಎಸಿಯಲ್ಲಿದ ೭-೮ ಜನ ಚಿಕ್ಕ ಮಕ್ಕಳು ಸೇರಿ ೨೧ ಜನ ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು ಅದರಲ್ಲಿ ೮ ಜನರ ಪರಿಸ್ಥಿತಿ ಚಿಂತನಕ ಸ್ಥಿತಿಯಲ್ಲಿದ್ದಾರೆ ಎಲ್ಲಾ ಗಾಯಾಳುಗಳಿಗೆ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆ ಸಾಗಿಸಲಾಗಿದೆ.
ಶಾಲೆಗೆ ರಜೆ ಕೂಲಿ ಕೆಲಸಕ್ಕೆ ಅಪ್ರಾಪ್ತರು :- ಕೊವೀಡ್ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಪರಿಣಾಮ ಪಟ್ಟಣ ಹಾಗೂ ಸಿರವಾರ ಮಾತ್ರವಲ್ಲದೆ ಬೇರೆ ಬೇರೆ ಗ್ರಾಮಾಂತರ ಪ್ರದೇಶದವರು ಹೆಚ್ಚಿನ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ.
ಅನೇಕ ಬಾರಿ ಅಧಿಕಾರಿಗಳು ದಾಳಿ ಮಾಡಿ ತಿಳಿಹೇಳಿದರು. ಸಹ ಕೂಲಿಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ೬ ತರಗತಿಯಿಂದ ಕಾಲೇಜು ತರಗತಿಗಳನ್ನು ಪ್ರಾರಂಭಿಸಲಾಗಿದೆ ಆದರೆ ಶಾಲೆ ಕಾಲೇಜಿಗೆ ಮಕ್ಕಳು ಹೋಗದೆ ಬಾಲಕಾರ್ಮಿಕರಾಗುತ್ತಿದ್ದಾರೆ. ಅನೇಕ ಬಾರಿ ದಾಳಿ ಮಾಡಿದಾಗ ಕೆಲಸಕ್ಕೆ ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿ ಮತ್ತೆ ಕರೆದುಕೊಂಡು ಹೋಗುತ್ತಾರೆ. ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಬಾರದು ಎಂದು ವಾಹನಗಳನ್ನು ವಶ ಪಡಿಸಿಕೊಂಡಾಗ ರಾಜಕಾರಣಿಗಳ ಒತ್ತಡ ತಂದು ವಾಹನ ಬಿಡಿಸಿಕೊಂಡು ಹೋಗುತ್ತಾರೆ. ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿ ಅಪಘಾತವಾದಾಗ ಅಧಿಕಾರಿಗಳ ಮೇಲೆ ಗೂಬೆ ಕುರಿಸುತ್ತಾರೆಂದು ಅಧಿಕಾರಿಗಳು ಹೇಳುತ್ತಾರೆ.
ಇದು ಇಲ್ಲದಂತಾದ ಅಂಬುಲೇನ್ಸ್ :- ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇತ್ತಿಚೇಗೆ ಶಾಸಕರಾದ ರಾಜಾ ವೆಂಕಟಪ್ಪನಾಯಕ ಅವರು ನೂತನ ಅಂಬುಲೇನ್ಸ್‌ನನ್ನು ನೀಡಿದರು. ಚಾಲಕನಿಗೆ ವಸತಿ ಕೋಣೆ ಇಲ್ಲದ ಕಾರಣ ಅವರು ಬೇರೆ ಕಡೆ ವಾಸ ಮಾಡುತ್ತಿರುವುದರಿಂದ ಸಂಜೆ ಅಪಘಾತವಾದಗ ಸ್ಥಳದಲ್ಲಿ ಅಂಬುಲೇನ್ಸ್ ಇದರೂ ಚಾಲಕ ಇಲ್ಲದೆ ಇರುವುದರಿಂದ ಸಕಾಲಕ್ಕೆ ಸೇವೆ ಲಭಿಸಲಿ.
ಕತ್ತಲೆಯಲ್ಲಿ ಆಸ್ಪತ್ರೆ:- ಆಸ್ಪತ್ರೆಯಲ್ಲಿ ಇನ್ವೇಟರಿ ದುರಸ್ಥಿಗಾಗಿ ೮೦ ಸಾವಿರ ರೂ ಖರ್ಚು ಮಾಡಿದ್ದನೆಂದು ವೈದ್ಯರು ತಿಳಿಸಿದ್ದಾರೆ. ಆದರೆ ವಿದ್ಯುತ್ ಕಡಿತವಾಗಿದೆ ಇನ್ವೇಟರ್ ಯಾಕೆ ಹತ್ತಿಲ ಸುಳ್ಳು ಹೇಳಬೇಡಿ ಎಂದು ಕೇಲ ಯುವಕರು ಡಾ.ಪರಿಮಳಾ ಮೈತ್ರಿಗೆ ತರಾಟೆಗೆ ತೆಗೆದುಕೊಂಡರು. ನಂತರ ವಿದ್ಯುತ್ ಆಗಮಿಸಿದರಿಂದ ಚಿಕಿತ್ಸೆ ನೀಡಲು ಸಹಕಾರಿಯಾಯಿತು.