ಸಕಾರಾತ್ಮಕ ಬದುಕು, ಧನಾತ್ಮಕ ಚಿಂತನೆಯಿಂದ ಮಾನವನಾಗಲು ಸಾಧ್ಯ: ಭಗವಂತ ಖೂಬಾ

ಬೀದರ:ನ.1: ಸಕಾರಾತ್ಮಕ ಬದುಕು ಹಾಗೂ ಧನಾತ್ಮಕ ಚಿಂತನೆಯಿಂದ ಮಾನವನಾಗಲು ಸಾಧ್ಯವಿದೆ ಎಂದು ಕೇಂದ್ರ ಸರ್ಕರದ ನವಿಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯ ಪಟ್ಟರು.

ಭಾನುವಾರ ನಗರದ ಜನವಾಡಾ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಕೇಂದ್ರದಿಂದ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮ, ಸ್ನೇಹಮಿಲನ ಹಾಗೂ ಸಮರ್ಪಿತ ಬಿ.ಕೆ ಸಹೋದರಿಯರ ಜನ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಒಂದು ಕಾಲದಲ್ಲಿ ವಿಶ್ವಕ್ಕೆ ಗುರುವಾದ ದೇಶ. ಇಲ್ಲಿ ಋಷಿ, ಮಹಾತ್ಮರು, ಸಾಧು, ಸಂತರು ಬಾಳಿ ಬದುಕಿದ ದೇಶದಾಗಿದೆಶಿಂತಹ ನೆಲದಲ್ಲಿ ಹುಟ್ಟಿರುವ ನಾವೆಲ್ಲರು ನಿಜಕ್ಕೂ ಸುದೈವಿಗಳು. ಆದರೆ, ಇಂದು ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿ ಧರ್ಮ, ಆಚಾರ, ವಿಚಾರ, ಸಂಸ್ಕøತಿ, ಪರೆಂಪರೆ ಎಲ್ಲವನ್ನು ಮರೆತು ಅರ್ಥಹೀನ, ಉದ್ದೇಶವಲ್ಲದ ಖಾಲಿ ಕೊಡದಂತಹ ಜೀವನ ಸಾಗಿಸುತ್ತಿದ್ದೇವೆ. ಹಣ ಹಾಗೂ ಅಧಿಕಾರದ ಬೆನ್ನ ಹಿಂದೆ ಬಿದ್ದು ತಾನು ಎಲ್ಲರುವೆ ಎಂಬೂದನ್ನು ಸಹ ಮರೆತು ಬಿಟ್ಟಿದ್ದಾನೆ. ಇದು ಆತನ ಅವನತಿಗೆ ಕಾರಣವಾಗಿತ್ತಿದೆ ಎಂಬುದನ್ನು ಸಹ ಅರಿಯುತ್ತಿಲ್ಲ. ಬರೀ ಭ್ರಮನಿರಸದಲ್ಲಿ ಕಾಲ ಕಳೆಯುತ್ತಿರುವನು. ಇದು ಬದಲಾವಣೆ ಅಗಬೇಕಾದರೆ ಯಾವ ಸ್ವಾರ್ಥ, ಯಾವ ದ್ವೇಷವಿಲ್ಲದ, ಪವಿತ್ರ ಆತ್ಮಗಳಿಂದ ಕೂಡಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ಸೇವೆಯಲ್ಲಿ ಅಥವಾ ಅವರ ಮಾರ್ಗದರ್ಶನದಲ್ಲಿ ನಡೆದರೆ ಖಂಡಿತ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಸಾಧ್ಯವಿದೆ ಎಂದರು.

ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೆಯಿ ಅವರು ಸದಾ ಈಶ್ವರಿಯ ಸೇವೆ ಬಗ್ಗೆ ನೆನಪು ಮಾಡುತ್ತಿದ್ದರು. ಹಾಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಓರ್ವ ಯೋಗಿಯಾಗಿದ್ದು, 135 ಕೋಟಿ ಜನರಿಗೆ ತಮ್ಮ ಜೀವನ ತ್ಯಾಗ ಮಾಡಿರುವ ಮಹಾನ ಸಂತ. ಅಂಥವರ ಕೈಯಲ್ಲಿ ನಮ್ಮಂಥವರಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಿರುವುದು ನನ್ನ ಸೌಭಾಗ್ಯ ಎಂದರು.

ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹಿನ್‍ಜಿ ಮಾತನಾಡಿ, ಬ್ರಹ್ಮಾಕುಮಾರಿ ಸಂಸ್ಕøತಿಯಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ಇದೇ ದಿನ ಬ್ರಹ್ಮಾಬಾಬಾ ಅವರು ತನ್ನ ಲೌಕಿಕ ಎಲ್ಲ ಸಂಪತ್ತನ್ನು ವಿಶ್ವ ಕಲ್ಯಾಣಕ್ಕಾಗಿ ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಅಧ್ಯಾತ್ಮಿಕ ಕೇಂದ್ರ ಆರಂಭಿಸಲು ವಿನಿಯೋಗಿಸಿದರು. ಪ್ರಕಾಶಮಣಿ ದಾದಿ, ಗುಲ್ಜಾರ್ ದಾದಿ ಹಾಗೂ ಜಾನಕಿ ದಾದಿ ಸೇರಿದಂತೆ 1936ರಲ್ಲಿ ಸುಮಾರು 300ಕ್ಕೂ ಅಧಿಕ ಸಹೋದರಿಯನ್ನು ಸೇರಿಸಿಕೊಂಡು ದೀಪಾವಳಿ ದಿನವೇ ಪ್ರಜಾಪಿತಾ ಬ್ರಹ್ಮಾಕುಮಾರಿ ಕೇಂದ್ರ ಹುಟ್ಟು ಹಾಕಿದರು. ಇಂದಿನ ದಿನ ನಾವೆಲ್ಲ ಸಮರ್ಪಿತ ಸಹೋದರಿಯರ ಜನ್ಮೋತ್ಸವ ಸಹ ಇದೆ ಎಂದರು.

ಹಿರಿಯ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ದುರ್ಗುಣಗಳನ್ನು ತೊಡೆದು ಹಾಕಿ, ಉತ್ತಮ ಸಂಸ್ಕಾರಿಗಳನ್ನಾಗಿಸಲು ಸದಾ ಈಶ್ವರೀಯ ಸಮಾಗಮದಲ್ಲಿ ಹಾಗೂ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದು ತಿಳಿ ಹೇಳಿದರು. ಬಿ.ಕೆ ಪ್ರಭಾಕರ್ ಭಾಯಿ ಮಾತನಾಡಿದರು.

ಇದೇ ವೇಳೆ ಈಶ್ವರಿಯ ಸೇವೆಯಲ್ಲಿ ಸಮಪಿತರಾದ ಬಿ.ಕೆ ಸಹೋದರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೇ ಕರ್ನಾಟಕ ರಾಜ್ಯೋತ್ಸವ ಮುನ್ನಾದಿನವಾದ್ದರಿಂದ ಕನ್ನಡ ರಾಜ್ಯೋತ್ಸವ ಜರುಗಿತು. ಬಿ.ಕೆ ಸಹೋದರಿಯರ ಜನ್ನದಿನೋತ್ಸವವನ್ನು ಜ್ಯೋತಿ ಬೆಳಗಿಸಿ, ಕೇಕ್ ಕತ್ತಿಸಿ ಆಯೋಜಿಸಲಾಗಿತ್ತು.

ಆರಂಭದಲ್ಲಿ ನೂಪೂರ ನೃತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಮುಖ್ಯಸೈ ಉಷಾ ಪ್ರಭಾಕರ ನೇತೃತ್ವದಲ್ಲಿ ಎಂಟು ಜನ ಕಲಾವಿದರು ಆಷ್ಟ ಲಕ್ಷ್ಮೀಯರ ವೇಶ ಧರಿಸಿ ಸ್ವಾಗತ ನೃತ್ಯಗೈದರು. ಬಿ.ಕೆ ವಾಣಿ ಬಹೆನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ವಿಜಯಕ್ಷ್ಮೀ ಬಹೆನ್ ವಂದಿಸಿದರು. ಕೇಂದ್ರಕ್ಕೆ ಸಂಬಂಧಿಸಿದ ಎಲ್ಲ ಶಾಖೆಗಳ ಮುಖ್ಯಸ್ಥರು, ಇತರೆ ಸಹೋದರಿಯರು, ಸಹೋದರರು ಕಾರ್ಯಕ್ರಮದಲ್ಲಿದ್ದರು.