ಸಕಲ ರೋಗಕ್ಕೂ ಯೋಗ ಮದ್ದು

ಕಲಬುರಗಿ:ಮೇ.11: ಉದನೂರು ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಅಪ್ಪಾಜಿ ಶಿಕ್ಷಣ ಟ್ರಸ್ಟ್ ರಾಜಮಾರ್ಗ ನವೋದಯ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಶಿವಾನಂದ್ ಸಾಲಿಮಠ ಅವರು. ಹಿಂದಿನ ಕಾಲದಲ್ಲಿ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕಾದರೆ ಮನುಷ್ಯನು ಪೂಜ್ಯ ಗುರು ರಾಮದೇವ್ ಬಾಬಾ ಅವರ ಆದರ್ಶ ದಂತೆ. ಪ್ರತಿನಿತ್ಯ ಯೋಗ ವ್ಯಾಯಾಮ ಮಾಡುವುದು ಅತ್ಯವಶ್ಯಕವಾಗಿದೆ ಎಂದರು

ಈ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ರಾಜಕುಮಾರ್ ಬಿರಾದರ ಉದನೂರ ಮಾತನಾಡಿದರು

ಸಂಸ್ಥೆಯ ಅಧ್ಯಕ್ಷರಾದ ಭಾಗಮ್ಮ ರಾಜಕುಮಾರ ಮಾತನಾಡಿ. ಅಪ್ಪಾಜಿ ಶಿಕ್ಷಣ ಸಂಸ್ಥೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ. ಸಂಗೀತ ಯೋಗ ಕರಟೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮಾಡುವ ಮೂಲಕ ಜನ ಮೆಚ್ಚುಗೆಯನ್ನು ಪಡೆದಿದೆ.
ಇದಕ್ಕೆ ಉದಾಹರಣೆಯಾಗಿ ಈ ಬಾರಿ ಕಲಬುರ್ಗಿಗೆ ಮೂರನೇ ಸ್ಥಾನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಂದಿದ್ದು ಎಲ್ಲರಿಗೂ ಹರುಷ ತಂದಿದೆ ಎಂದು ಮಾತನಾಡಿದರು

ಕಾರ್ಯಕ್ರಮದ ನಿರೂಪಣೆಯನ್ನು ಗುರು ಸಾಲಿ ಮಠವರು ನಡೆಸಿಕೊಟ್ಟರು

ಶಿಕ್ಷಕರಾದ ಅಭಿಲಾಶ್ ಅವರು ವಂದಿಸಿದರು

ಈ ಸಂದರ್ಭದಲ್ಲಿ ಗುಂಡಾರಾಯ ಬಿರಾದಾರ್ ಭೀಮಶಂಕರ್ ಬಿರಾದರ್ ಸೇರಿದಂತೆ ಅನೇಕರು ಸೇರಿದಂತೆ
ವಿದ್ಯಾರ್ಥಿ ವಿದ್ಯಾರ್ಥಿನಿಯರು ಉದನೂರು ಗ್ರಾಮದ ಗ್ರಾಮಸ್ಥರು ಬಡಾವಣೆಯ ನಾಗರಿಕರು ಪಾಲ್ಗೊಂಡಿದ್ದರು