ಸಕಲಸರ್ವಕ್ಕೂ ಸಂಗೀತ ಮದ್ದು-ವಾಜೀದ್

ಮಾನ್ವಿ.ಸೆ.೨೩- ರಾಜ್ಯ ಮತ್ತು ದೇಶದ ಅತ್ಯುತ್ತಮ ಶಾಸ್ತ್ರೀಯ ಸಂಗೀತ ಗವಾಯಿಗಳು ಮತ್ತು ನಮ್ಮ ತಾಲೂಕಿನ ಜಂಬಲದಿನ್ನಿ ಗ್ರಾಮದ ಸಿದ್ದರಾಮ ಜಂಬಲದಿನ್ನಿ ಅವರು ಮೂವತ್ತರಿಂದ ಹಾಗೂ ಇಪ್ಪತ್ತನೆಯ ದಶಕದಲ್ಲಿಯೇ ತಮ್ಮ ಶಾಸ್ತ್ರೀಯ ಸಂಗೀತದ ಮೂಲಕ ಜನಪ್ರಿಯತೆ ಗಳಿಸಿದ ಶ್ರೇಷ್ಠ ಗವಾಯಿಗಳು ಅತ್ಯುತ್ತಮ ಸಂಗೀತಾ ಮನುಷ್ಯನ ಜೀವನದ ಒಂದು ಅಂಗವಾದಲ್ಲಿ ಸರ್ವಕ್ಕೂ ಸಕಲ ರೀತಿಯ ಮದ್ದು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಂತರಾಷ್ಟ್ರೀಯ ಕುಂಚ ಕಲಾವಿದ ವಾಜೀದ್ ಹೇಳಿದರು.
ಪಟ್ಟಣದ ಕರ್ನಾಟಕ ರಕ್ಷಣೆ ವೇದಿಕೆ ತಾಲೂಕ ಅಧ್ಯಕ್ಷ ಸುಭಾನ್ ಬೇಗ್ ಇವರ ಕಛೇರಿಯಲ್ಲಿ ನಡೆದ ಜಂಬಲದಿನ್ನಿಯವರ ೧೦೩ ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮ ಜಂಬಲದಿನ್ನಿಯವರ ವಂಶದ ಕುಡಿ ಅವರ ಮೊಮ್ಮಗ ಅಮರೇಶ ಗವಾಯಿಯವರು ಪ್ರಾರ್ಥನೆ ಗೀತೆ ಮತ್ತು ದೀಪಾ ಬೆಳಗಿಸುವ ಮೂಲಕ ಆರಂಭಿಸಿದರು.
ನಂತರ ಸಮಾಜಿಕ ಕಾರ್ಯಕರ್ತ ಅಣ್ಣಪ್ಪ ಮೇಟಿಗೌಡ ಮಾತಾನಾಡಿ ಪಂಡಿತ್ ಸಿದ್ದರಾಮ ಜಂಬಲದಿನ್ನಿಯವರ ಜನನ ಮರಣದ ನಡುವಿನ ಸಾಧನೆಯನ್ನು ವಿವರಿಸುತ್ತಾ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿರುವ ಸಿದ್ದರಾಮ ಜಂಬಲದಿನ್ನಿ ಅವರ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅತಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದವರು ಅದರಂತೆ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿ ಅತ್ಯದ್ಭುತ ನಟರಾಗಿದ್ದವರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿರುವ ಇವರನ್ನು ರಾಯಚೂರು ಜಿಲ್ಲಾ ಕನ್ನಡ ಪ್ರಾಧಿಕಾರ ಅಧಿಕಾರಿಗಳು ಯಾಕೆ ಇವರ ಜನ್ಮದಿಚಾರಣೆಯನ್ನು ಆಚರಣೆ ಮಾಡುವುದಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.
ನಂತರ ಕರ್ನಾಟಕ ರಕ್ಷಣೆ ವೇದಿಕೆ ತಾಲೂಕ ಅಧ್ಯಕ್ಷ ಸುಬಾನ್ ಬೇಗ್ ಇವರ ತಂಡದಿಂದ ಗವಾಯಿಗಳ ಮೊಮ್ಮಗನಾದ ಪಂಡಿತ ಅಮರೇಶ ಗವಾಯಿಗಳಿಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು ನಂತರ ಮಾತಾಡಿದ ಅವರು ನಾನು ಇಲ್ಲಿಗೆ ಆಗಮಿಸುವುದಕ್ಕೆ ಪ್ರಮುಖ ಕಾರಣ ಚಂದ್ರಶೇಖರ ಮದ್ಲಾಪೂರ ಅವರ ಸ್ವರಚನೆಯ “ಮಾರಿಕೊಳ್ಳದಿರು ಮಾನವ” ಎನ್ನುವ ಕವನ ಬಹಳ ಅತ್ಯುತ್ತಮವಾಗಿದೆ ಅದನ್ನು ಮುಂದಿನ ದಿನಗಳಲ್ಲಿ ಮುದ್ರಣ ಮಾಡಿಸಲಾಗುತ್ತದೆ ಎಂದು ಪ್ರಾಯೋಗಿಕವಾಗಿ ಒಮ್ಮೆ ಕಾರ್ಯಕ್ರಮದಲ್ಲಿ ಹಾಡಿದರು.
ಈ ಸಂದರ್ಭದಲ್ಲಿ ಅಮರೇಶ ಗಾವಾಯಿ, ಲಲಿತಾ ಕಲಾ ಅಕಾಡಮಿ ಸದಸ್ಯ ವಾಜೀಸ್, ಪುರಸಭೆ ಸದಸ್ಯ ಶರಣಪ್ಪ ಮೇದಾ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಚಂದ್ರಶೇಖರ ಮದ್ಲಾಪೂರ, ಅಣ್ಣಪ್ಪ ಮೇಟಿಗೌಡ, ಅಜ್ಮತ್ ಖಾನ್, ಜೆ ಎಚ್ ದೇವರಾಜ, ಕರ್ನಾಟಕ ರಕ್ಷಣೆ ವೇದಿಕೆ ತಾಲೂಕ ಅಧ್ಯಕ್ಷ ಸುಭಾನ್ ಬೇಗ್, ಎಸ್ ಎ ರಶೀದ್, ಇದಾಯಿತ್ ನಾಯ್ಕ್, ಸಲಿಂ, ಕಾಜಾ ಪಾಷ, ಮೈಬೂಬ್ ಖುರೇಷಿ, ಶಶಂಕುರೇಷಿ. ಯಾಕೂಬ್ ಸಾಬ್. ಖಲೀಲ್ ಸಾಬ್, ಆರೀಫ್, ಕಾಮೇಶ, ಅಮೀರ್, ಬಸವ ಹೊಸಮನಿ, ಅಬೀಬ್ ನಧಾಪ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.