ವಿಜಯಪುರ:ಜೂ.8: ಪ್ರೀತಿ ವಿಶ್ವ ಭ್ರಾತೃತ್ವ ಅಳವಡಿಸಿಕೊಂಡು ಸಕಲರಲ್ಲಿ ದೇವರನ್ನು ಕಾಣುವ ಹೃದಯವಂತಿಕೆ ಇಂದಿಗೆ ಅತ್ಯವಶ್ಯವಾಗಿದೆ” ಎಂದು ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿಯ ವಚನ ಸಾಹಿತ್ಯ ಸಂಸ್ಕøತಿ ವೇದಿಕೆ ಈಚೆಗೆ ನಗರದ ಷಣ್ಮುಖಾರೂಢ ಮಠದಲ್ಲಿ ಪ್ರಥಮ ವಚನೋ ತ್ಸವ-2023 ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಜನಪ್ರೀಯತೆ ಉತ್ತುಂಗದಲ್ಲಿದ್ದ ಕಲ್ಯಾಣವು ಮಾನವ ಕಲ್ಯಾಣದ ಕಾರ್ಯಾಗಾರವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ ಎಂ ಎಸ್ ಮದಭಾವಿ ಮಾತನಾಡಿ, ವಚನ ಪಿತಾಮಹ ಫ ಗು ಹಳಕಟ್ಟಿಯವರು ಕಷ್ಟ ಪಟ್ಟು ಅಲ್ಲಲ್ಲಿ ಚದುರಿಹೋಗಿದ್ದ ಬಸವಾದಿ ಶರಣರ ವಚನಗಳನ್ನು ಕ್ರೂಢಿ ಕರಿಸಿ ಅವನ್ನು ಮುದ್ರಣಗೊಳಿಸುವ ಮೂಲಕ ದೈವತ್ವಕ್ಕೆ ಏರಬಲ್ಲ ವ್ಯಕ್ತಿತ್ವವನ್ನು ತಮ್ಮ ಕಾಯಕದಿಂದ ತೋರಿಸಿದವರು ಎಂದು ಬಣ್ಣಿಸಿದರು.
ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ನ್ಯಾಯವಾದಿ ವಿ ಎಸ್ ಖಾಡೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಮದಭಾವಿ ಯವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮಹಾಪೋಷಕ ಶಂಕರ ಬಸವಪ್ರಭು(ಸಕ್ರಿ) ಪ್ರಮುಖ ಉಪಸ್ಥಿತರಿದ್ದರು. ಖ್ಯಾತ ಮಕ್ಕಳ ಸಾಹಿತಿ ಜಂಬು ನಾಥ ಕಂಚ್ಯಾಣಿ ಅವರು ಶರಣರ ಕಾಯಕ, ದಾಸೋಹ ಮತ್ತು ಪ್ರಸಾದ ಎಂಬ ವಿಷಯ ಕುರಿತು ಹಾಗೂ ಸಿಕ್ಯಾಬ್ ಮಹಿಳಾ ಕಾಲೇಜು ಉಪನ್ಯಾಸಕ ಪ್ರೊ ಯು ಎನ್ ಕುಂಟೋಜಿ ಅವರು ಶರಣರ ದೃಷ್ಟಿಯಲ್ಲಿ ಮೋಹ- ನಿರ್ಮೋಹ ಎಂಬ ವಿಷಯ ಕುರಿತು ಉಪಸ್ಯಾನ ನೀಡಿದರು.
ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಅಂದೇ ಸಂಜೆ ನಡೆದ ವಚನೋತ್ಸವ ಭಾಗ -2 ರಲ್ಲ್ಲಿ ವಚನ ವೈಭವ-ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ಶರಣ ಸಂಸ್ಕøತಿಯಂತೆ ಇವನಾರವ ಎನ್ನದೇ ಸಮಾಜದ ಎಲ್ಲ ಸ್ತರಗಳ ಜನ ತಾರತಮ್ಯ ಭೇದ ಭಾವವಿಲ್ಲದೇ ವೇದಿಕೆ ಕಾರ್ಯ ನಿರ್ವಹಿಸಿದೆ ಎಂದರು.
ಮಕ್ಕಳಿಗೆ ಜ್ಞಾನದಬೀಜ ಬಿತ್ತಿ ಶರಣ ಸಂದೇಶ ತಿಳಿಸಿ ನವ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಸಂಸ್ಕøತಿ ವೇದಿಕೆ ಇತಿಹಾಸ ಬರೆಯಲಿ ಎಂದು ಹಾರ್ಯಸಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಕಣಬೂರ, ಜೆ ಡಿ ಕೊಟ್ನಾಳ, ಎನ್ ಆರ್ ಕುಲಕರ್ಣಿ, ಆರ್ ಎ ಗುಡಿ, ಶಿವಪುತ್ರಪ್ಪ ಕೃಷ್ಣಮೂರ್ತಿ, ಪಂಡಿತರಾವ ಪಾಟೀಲ, ಸುಜಾತಾ ಪಟ್ಟಣಶೆಟ್ಟಿ ಅಲ್ಲದೇ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.