ಸಂಸ್ಥಾಪನಾ ದಿನಾಚರಣೆ

ಧಾರವಾಡ ,ನ22: ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕೆನರಾ ಬ್ಯಾಂಕ್ ನರೇಂದ್ರ ಶಾಖೆವತಿಯಿಂದ ಹಮ್ಮಿಕೊಂಡಿದ್ದ ಕುರುಬಗಟ್ಟಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಎಚ್.ಮಲ್ಲೇಶಿ, ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಹಣ ಜಮೆ ಮಾಡಲು ಅನುಕೂಲ ಆಗುವಂತೆ ಈಗಾಗಲೇ ಖಾತೆಗಳನ್ನು ತೆರೆಯಿಸಲಾಗಿದೆ. ಇನ್ನೊಂದೆಡೆ ರೈತರು ಮತ್ತು ಇತರ ವರ್ಗಗಳ ಜನರಿಗೂ ಹಲವಾರು ಸೌಲಭ್ಯಗಳಿವೆ ಎಂದರು.
ಕೃಷಿ ಸಹಾಯಕ ವ್ಯವಸ್ಥಾಪಕಿ ಲೀಲಾವತಿ ಅವರು. ಕೃಷಿ ಸಂಬಂಧಿ ಸವಲುತ್ತುಗಳನ್ನು ವಿವರಿಸಿದರು.
ಗ್ರಾ.ಪಂ.ಅಧ್ಯಕ್ಷ ಬಸವಣ್ಣೆಪ್ಪ ಕರೆಸಿರಿ, ಕೆನರಾ ಬ್ಯಾಂಕ್ ಕುರುಬಗಟ್ಟಿ ಗ್ರಾಮ ಮಿತ್ರ ರಾಚಯ್ಯ ಹಿರೇಮಠ, ಪ್ರಮುಖರಾದ ಚನ್ನಬಸಪ್ಪ ಗುಡ್ಡಪ್ಪನವರ, ಈರಯ್ಯ ಹಿರೇಮಠ, ರುದ್ರಪ್ಪ ಅರಿವಾಳ, ಅರ್ಜುನ ಜಂಗಳಿ, ಪುಂಡಪ್ಪ ರುದ್ರಪ್ಪನವರ, ರುದ್ರಪ್ಪ ಸಲಕಿನಕೊಪ್ಪ ಇತರರು ಈ ಸಂದರ್ಭದಲ್ಲಿದ್ದರು.