ಸಂಸ್ಕøತ ಭಾಷೆ ಜಾಗೃತಿ ಅಗತ್ಯ


ಧಾರವಾಡ,ಸೆ.1: ನಗರದ ಸಂಸ್ಕೃತ ಪಾಠ ಶಾಲೆಗಳ ಆಶ್ರಯದಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಸಾಧನಕೇರಿಯ ಆಲೂರು ವೆಂಕಟರಾವ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಸಿ.ಎಲ್.ವೈ. ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ವಿ.ಆರ್.ಟಿ.ಭಟ್ ಅವರು, ಭಾಷೆಗಳಲ್ಲಿ ಸಂಸ್ಕೃತ ಕೂಡ ಮುಖ್ಯ ಭಾಷೆ. ಎಲ್ಲ ಭಾಷೆಗಳ ತಾಯಿಯಾದ ಸಂಸ್ಕೃತವನ್ನು ತಾಯಿಯಂತೆ ಗೌರವಿಸಬೇಕು.
ಅತ್ಯಂತ ಸಮೃದ್ಧ ಸಂಸ್ಕೃತ ಭಾಷೆಯ ಅಧ್ಯಯನದಿಂದ ಭಾಷೆಯಲ್ಲಿ ಸ್ಪಷ್ಟತೆ ಉಂಟಾಗುತ್ತದೆ. ವ್ಯಾಕರಣದ ಅಧ್ಯಯನದಿಂದ ಭಾಷೆಯಲ್ಲಿ ಶುದ್ಧತೆ ಲಭ್ಯವಾಗಲಿದೆ.
ಎಲ್ಲ ವೇದಗಳಿಗೆ, ಕಾವ್ಯಗಳಿಗೆ ,ಶಾಸ್ತ್ರಗಳಿಗೆ ಸಂಸ್ಕೃತ ಆಧಾರ ಸ್ತಂಭ ಭಾಷೆಯಾಗಿದೆ. ಈ ದಿಸೆಯಲ್ಲಿ ಪ್ರತಿ ಗ್ರಾಮಗಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಜಾಗೃತಿಯಾಗಬೇಕಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಆಲೂರು ವೆಂಕಟರಾವ್ ಕಾಲೇಜಿನ ಮುಖ್ಯ ಶಿಕ್ಷಕ ಐ.ಎಂ.ಪೀರಜಾದೆ ಮಾತನಾಡಿ,ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಅಧ್ಯಯನ ಮಾಡಿಸುವ ಕೆಲಸವನ್ನು ಪಾಲಕರು ಮಾಡುವ ಮೂಲಕ ಪೆÇ್ರೀತ್ಸಾಹಿಸ
ಬೇಕು ಎಂದರು.
ಬಿ.ಬಿ.ಆರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಾರಿ ಗಿರಿಭಟ್ಟನವರ ಸ್ವಾಗತಿಸಿದರು.
ಕು.ನವ್ಯಾ ಹಿರೇಮಠ ಮತ್ತು ಕು.ಅಂಬಿಕಾ ನಾಯಕ ಪ್ರಾರ್ಥಿಸಿದರು.
ಶ್ರೀಧರರಾವ್ ಜಿ.ಜಿ. ನಿರೂಪಿಸಿದರು. ಎಸ್.ಬಿ.ಗುಡೆಣ್ಣವರ ವಂದಿಸಿದರು. ಕಾರ್ಯಕ್ರಮಕ್ಕೂ ಮುಂಚೆ ನಡೆದ ಜಾಥಾ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.